ಪಟ್ನಾ: ‘ಇಂಡಿಯಾ’ ಒಕ್ಕೂಟಕ್ಕೆ ವಾಪಸ್ ಬರುವಂತೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ನೀಡಿರುವ ಕರೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಗೂಡಾರ್ಥದಲ್ಲಿ ಪ್ರತಿಕ್ರಿಯಿಸಿದರು.

ನೂತನ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜಭವನಕ್ಕೆ ನಿತೀಶ್ ಕುಮಾರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ಇದೇನು ಹೇಳುತ್ತಿದ್ದೀರಿ’ ಎಂದು ಮರು ಪ್ರಶ್ನಿಸಿದರು.

ನಂತರ ಸುದ್ದಿಗಾರರು, ಈ ಸರ್ಕಾರವು ಪೂರ್ಣ ಅವಧಿ ಅಧಿಕಾರದಲ್ಲಿ ಇರುತ್ತದೆಯೇ ಎಂದು ಕೇಳಿದರು. ಖಾನ್ ಅವರು ಮಧ್ಯಪ್ರವೇಶಿಸಿ, ‘ಈ ಕಾರ್ಯಕ್ರಮದಲ್ಲಿ ಇಂಥ ಪ್ರಶ್ನೆಗಳನ್ನು ಕೇಳುವುದು ಸೂಕ್ತ ಅಲ್ಲ. ಇದು ಸಂತೋಷದ ದಿನ. ಖುಷಿಯ ವಿಚಾರಗಳ ಬಗ್ಗೆ ಮಾತ್ರ ಮಾತನಾಡೋಣ’ ಎಂದು ಹೇಳಿದರು.

ಲಾಲು ಪ್ರಸಾದ್ ಅವರು ಇತ್ತೀಚೆಗೆ ‘ನಿತೀಶ್ ಕುಮಾರ್ ಅವರಿಗೆ ಬಾಗಿಲುಗಳು ತೆರೆದಿವೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.