ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಕನ್ಯಾ ಉತ್ಥಾನ್‌ ಯೋಜನೆಗೆ ಚಾಲನೆ

ಮುಜಾಫರ್‌ ಘಟನೆ ಬಳಿಕ ಎಚ್ಚೆತ್ತ ಬಿಹಾರ ಸರ್ಕಾರ
Last Updated 5 ಆಗಸ್ಟ್ 2018, 19:32 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ):‌ಮುಜಾಫರ್‌ಪುರ ಪುನರ್ವಸತಿ ಕೇಂದ್ರದಲ್ಲಿನ ಲೈಂಗಿಕ ಹಗರಣದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌, ಮಹಿಳೆಯರ ಸಬಲೀಕರಣ ನಿಟ್ಟಿನಲ್ಲಿ ‘ ಮುಖ್ಯಮಂತ್ರಿ ಕನ್ಯಾ ಉತ್ಥಾನ್‌ ಯೋಜನೆ’ಗೆ ಚಾಲನೆ ನೀಡಿದ್ದಾರೆ.

ಈ ಯೋಜನೆ ಅನ್ವಯ, ಹೆಣ್ಣು ಮಗು ಹುಟ್ಟಿನಿಂದ ಪದವಿ ಶಿಕ್ಷಣ ಪಡೆಯುವವರೆಗೆ ಹಂತ ಹಂತವಾಗಿ ₹54,100 ಆರ್ಥಿಕ ನೆರವು ಪಡೆಯಲಿದೆ. ಈ ಯೋಜನೆಗಾಗಿ ಬಿಹಾರ ಸರ್ಕಾರವು ₹7221 ಕೋಟಿ ವಿನಿಯೋಗಿಸಲಿದೆ.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ನಿತೀಶ್‌ ಕುಮಾರ್‌, ನಾನು ಈಗ ಮಿಶ್ರ ಸಂವೇದನೆದಲ್ಲಿದ್ದೇನೆ ಎಂದು ತಿಳಿಸಿದರು.

ಆರು ಮಂದಿ ಅಮಾನತು:ಪುನರ್ವಸತಿ ಕೇಂದ್ರದ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪ ಎಸಗಿದ ಸಮಾಜ ಕಲ್ಯಾಣ ಇಲಾಖೆಯ ಆರು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಬಿಹಾರ ಸರ್ಕಾರ ಆದೇಶ ಹೊರಡಿಸಿದೆ.

ಮುಜಾಫರ್‌ಪುರ, ಮುಂಗೇರ್, ಅರಾರಿಯಾ, ಮಧುಬನಿ, ಭಾಗಲ್ಪುರ ಹಾಗೂ ಭೋಜ್‌ಪುರ ಜಿಲ್ಲೆಗಳಮಕ್ಕಳ ರಕ್ಷಣಾ ಘಟಕದ ನಿರ್ದೇಶಕರನ್ನು ಅಮಾನತುಗೊಳಿಸಿ,ಭಾನುವಾರ ರಾತ್ರಿಯೇ ಈ ಆದೇಶ ಹೊರಡಿಸಿದೆ.

ನಿತೀಶ್‌ ರಾಜೀನಾಮೆ ನೀಡಲ್ಲ: ‘ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯಲ್ಲಿ ಮುಜಾಫರ್‌ಪುರ ಪ್ರಕರಣದ ವಿಚಾರಣೆ ನಡೆಸಲು ಸರ್ಕಾರ ಸಿದ್ಧವಿದ್ದು, ಈ ಬೆಳವಣಿಗೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ’ ಎಂದು ಪಕ್ಷದ ಹಿರಿಯ ನಾಯಕ ಕೆ.ಸಿ.ತ್ಯಾಗಿ ತಿಳಿಸಿದ್ದಾರೆ.

‘ನಿತೀಶ್‌ ಅವರು ಸೂಕ್ಷ್ಮ ವ್ಯಕ್ತಿ. ಈ ಘಟನೆ ಬಗ್ಗೆ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.ಅತ್ಯಂತ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧಪಕ್ಷಗಳು ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿರುವುದು ನಾಚಿಕೆಗೇಡಿನ ವಿಚಾರ. ಹೆಣ್ಣು ಮಕ್ಕಳ ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು, ಪ್ರತಿಪಕ್ಷಗಳು ಒಗ್ಗಟ್ಟುಪ್ರದರ್ಶಿಸಿರುವುದು ನಾಚಿಕೆಗೇಡಿನ ವಿಚಾರ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT