ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಿಧ ಪ್ರವೇಶ ಪರೀಕ್ಷೆಗಳ ದಿನಾಂಕ ಘೋಷಿಸಿದ ಎನ್‌ಟಿಎ

Published 28 ಜೂನ್ 2024, 20:12 IST
Last Updated 28 ಜೂನ್ 2024, 20:12 IST
ಅಕ್ಷರ ಗಾತ್ರ

ನವದೆಹಲಿ: ಯುಜಿಸಿ–ಎನ್‌ಇಟಿ ಸೇರಿದಂತೆ ಮೂರು ಪ್ರಮುಖ ಪ್ರವೇಶ ಪರೀಕ್ಷೆಗಳು ನಡೆಯುವ ಹೊಸ ದಿನಾಂಕಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಶುಕ್ರವಾರ ಘೋಷಿಸಿದೆ.

ಅಕ್ರಮಗಳು ನಡೆದಿರುವ ಆರೋಪದಿಂದಾಗಿ ಕೆಲ ಪರೀಕ್ಷೆಗಳನ್ನು ರದ್ದುಪಡಿಸಲಾಗಿದ್ದರೆ, ಮತ್ತೆ ಕೆಲ ಪರೀಕ್ಷೆಗಳನ್ನು ಎನ್‌ಟಿಎ ಮುಂದೂಡಿತ್ತು.

ಯುಜಿಸಿ–ಎನ್‌ಇಟಿ ಆಗಸ್ಟ್‌ 21ರಿಂದ ಸೆಪ್ಟೆಂಬರ್ 4ರವರೆಗೆ ನಡೆಯಲಿದೆ. 

ಸಿಎಸ್ಐಆರ್‌ ಯುಜಿಸಿ–ಎನ್‌ಇಟಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಂದೂಡಲಾಗಿತ್ತು. ಈ ಪರೀಕ್ಷೆಯನ್ನು ಜುಲೈ 25ರಿಂದ 27ರ ವರೆಗೆ ನಡೆಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ.

ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಎನ್‌ಸಿಇಟಿ) ಜುಲೈ 10ರಂದು ನಡೆಸಲಾಗುತ್ತದೆ ಎಂದು ತಿಳಿಸಿದೆ.

ಐಐಟಿ, ಎನ್‌ಐಟಿ, ಆರ್‌ಐಇ ಸೇರಿದಂತೆ ಆಯ್ದ ಕೇಂದ್ರೀಯ ಮತ್ತು ರಾಜ್ಯಗಳಲ್ಲಿನ ವಿಶ್ವವಿದ್ಯಾಲಯಗಳು ಅಥವಾ ಶಿಕ್ಷಣ ಕೇಂದ್ರಗಳಲ್ಲಿನ ನಾಲ್ಕು ವರ್ಷಗಳ ಐಟಿಇಪಿ (ಇಂಟಿಗ್ರೇಟೆಡ್ ಟೀಚರ್ ಎಜುಕೇಷನ್ ಪ್ರೋಗ್ರಾಮ್) ಪ್ರವೇಶಕ್ಕಾಗಿ ನಡೆಯುವ ಎನ್‌ಸಿಇಟಿಯನ್ನು ಜೂನ್‌ 12ರಂದು ನಿಗದಿಯಾಗಿತ್ತು. ನಿಗದಿತ ಸಮಯಕ್ಕೆ ಆರಂಭವಾಗುವುದಕ್ಕೂ ಮುನ್ನ ಈ ಪರೀಕ್ಷೆಯನ್ನು ಮುಂದೂಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT