ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: ನಿವೃತ್ತಿ ಬೆನ್ನಲ್ಲೇ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ಪಡೆದ ಪಾಂಡಿಯನ್‌

Published 24 ಅಕ್ಟೋಬರ್ 2023, 5:30 IST
Last Updated 24 ಅಕ್ಟೋಬರ್ 2023, 5:30 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಮಾಜಿ ಆಪ್ತ ಕಾರ್ಯದರ್ಶಿ ವಿ.ಕೆ. ಪಾಂಡಿಯನ್‌ ಅವರನ್ನು ಕ್ಯಾಬಿನೆಟ್‌ ದರ್ಜೆ ಸಚಿವರ ಶ್ರೇಣಿಯೊಂದಿಗೆ ಚೇರ್ಮನ್‌ 5ಟಿ (Transformational Initiatives) ಆಗಿ ನೇಮಕ ಮಾಡಲಾಗಿದೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಪಾಂಡಿಯನ್ ಅವರು ತಮ್ಮ ಸೇವೆಯಿಂದ ಸ್ವಯಂ ನಿವೃತ್ತಿ ಘೋಷಿಸಿದ 24 ಗಂಟೆಯೊಳಗೆ ಈ ಬೆಳವಣಿಗೆ ನಡೆದಿದೆ.

‘ಕ್ಯಾಬಿನೆಟ್‌ ದರ್ಜೆ ಸಚಿವರ ಶ್ರೇಣಿಯೊಂದಿಗೆ ವಿ.ಕೆ ಪಾಂಡಿಯನ್‌ ಅವರನ್ನು ಚೇರ್ಮನ್‌ 5ಟಿ ಮತ್ತು ನಬಿನ್ ಒಡಿಶಾ ಆಗಿ ನೇಮಕಗೊಳಿಸಲಾಗಿದೆ. ಪಾಂಡಿಯನ್ ಅವರು ನೇರವಾಗಿ ಮುಖ್ಯಮಂತ್ರಿಯವರ ಅಡಿಯಲ್ಲಿ ಕೆಲಸ ಮಾಡುತ್ತಾರೆ’ ಎಂದು ಸಾಮಾನ್ಯ ಆಡಳಿತ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ತಿಳಿಸಿದೆ.

2011 ರಲ್ಲಿ ಮುಖ್ಯಮಂತ್ರಿ ಕಚೇರಿ ಸೇರಿದ್ದ ಪಾಂಡಿಯನ್, ಅಲ್ಲಿಂದ ಇಲ್ಲಿಯವರೆಗೆ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಖಾಸಗಿ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

2019ರಲ್ಲಿ ನವೀನ್‌ ಪಟ್ನಾಯಕ್‌ ಐದನೇ ಬಾರಿ ಮುಖ್ಯಮಂತ್ರಿ ಗದ್ದುಗೆಗೇರಿದ್ದು, ಆ ವೇಳೆ ಪಾಂಡಿಯನ್‌ ಅವರಿಗೆ ‘5ಟಿ ಕಾರ್ಯದರ್ಶಿ’ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT