ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರೊಂದು ಹಳಿಯಲ್ಲಿ ಕೋರಮಂಡಲ ಎಕ್ಸ್‌ಪ್ರೆಸ್ ಸಂಚರಿಸಿದ್ದು ಅಪಘಾತಕ್ಕೆ ಕಾರಣವಾಯಿತೇ?

Published 3 ಜೂನ್ 2023, 14:35 IST
Last Updated 3 ಜೂನ್ 2023, 14:35 IST
ಅಕ್ಷರ ಗಾತ್ರ

ನವದೆಹಲಿ: ಒಡಿಶಾದ ಬಾಲೆಸೋರ್‌ನಲ್ಲಿ ಶುಕ್ರವಾರ ಸಂಜೆ ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಬೇರೊಂದು ಟ್ರ್ಯಾಕ್‌ನಲ್ಲಿ ಸಂಚರಿಸಿದ್ದರಿಂದ ತ್ರಿವಳಿ ಅಪಘಾತಕ್ಕೆ ಕಾರಣವಾಯಿತೇ?

ಪ್ರಾಥಮಿಕ ತನಿಖೆಯಲ್ಲಿ ಈ ಒಂದು ಅಂಶ ಬೆಳಕಿಗೆ ಬಂದಿದೆ. 

ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಗಂಟೆಗೆ 128 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು. ಎದುರಿನಿಂದ ಬರುತ್ತಿದ್ದ ಬೆಂಗಳೂರು–ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್ ರೈಲು ಗಂಟೆಗೆ 116 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು. ಇದರ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಿಲ್ದಾಣ ಜಾಗದಲ್ಲಿ ಬಹು ಎಂಜಿನ್‌ ಗೂಡ್ಸ್‌ ರೈಲು ಸಂಚಾರಕ್ಕೆ ಅನುಕೂಲವಾಗುವಂತೆ 750 ಮೀಟರ್ ಉದ್ದದ ಲೂಪ್‌ ಲೇನ್ ನಿರ್ಮಿಸಲಾಗಿತ್ತು. 

ಪ್ರತ್ಯಕ್ಷದರ್ಶಿ ಅನುಭವ ದಾಸ್‌ ಅವರ ಪ್ರಕಾರ, ’ಕೋರಮಂಡಲ್‌ ಎಕ್ಸ್‌ಪ್ರೆಸ್ ರೈಲು ಗೂಡ್ಸ್‌ ರೈಲಿನತ್ತ ರಭಸವಾಗಿ ನುಗ್ಗಿದಾಗ ಅಪಘಾತ ಸಂಭವಿಸಿ, ಬೋಗಿಗಳು ಮುಖ್ಯ ಟ್ರ್ಯಾಕ್‌ ಮೇಲೆ ಬಿದ್ದವು‘ ಎಂದಿದ್ದಾರೆ.

ಆದರೆ ಈ ಸಂಗತಿಯನ್ನು ರೇಲ್ವೆ ಅಧಿಕಾರಿಗಳು ಈವರೆಗೂ ದೃಢಪಡಿಸಿಲ್ಲ.

ಅಪಘಾತ ಸಂದರ್ಭದಲ್ಲಿ ಈ ಎರಡೂ ರೈಲುಗಳು ಸುಮಾರು 2 ಸಾವಿರ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT