ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2015ರಿಂದ ದೆಹಲಿ ಸರ್ಕಾರ 440 ಉದ್ಯೋಗಗಳನ್ನು ಮಾತ್ರ ನೀಡಿದೆ: ಬಿಜೆಪಿ

Last Updated 3 ಏಪ್ರಿಲ್ 2023, 14:38 IST
ಅಕ್ಷರ ಗಾತ್ರ

ನವದೆಹಲಿ: 2015ರಿಂದ ದೆಹಲಿ ಸರ್ಕಾರ 440 ಉದ್ಯೋಗಗಳನ್ನು ಮಾತ್ರ ನೀಡಿದ್ದು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ 12 ಲಕ್ಷ ಉದ್ಯೋಗಗಳನ್ನು ಒದಗಿಸಿದೆ ಎಂದು ದೆಹಲಿ ಸರ್ಕಾರ ಹೇಳುತ್ತಿದೆ. ಆದರೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಪ್ರಕಾರ ಈ ಅಂಕಿಅಂಶ ತಪ್ಪಾಗಿದೆ ಎಂದು ಬಿಜೆಪಿಯ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.

ಬಿಜೆಪಿಯ ಆರೋಪಗಳಿಗೆ ಎಎಪಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕೇಜ್ರಿವಾಲ್ ದೇಶದ ಅತ್ಯಂತ ದೊಡ್ಡ ಸುಳ್ಳುಗಾರ, ಭ್ರಷ್ಟ ಮತ್ತು ಅಪ್ರಮಾಣಿಕ ಮುಖ್ಯಮಂತ್ರಿ ಆಗಿದ್ದಾರೆ ಎಂದು ಅವರು ಆರೋಪಿಸಿದರು.

ಅಸ್ಸಾಂ ಭೇಟಿ ವೇಳೆಯಲ್ಲಿ ಕೇಜ್ರಿವಾಲ್, ಎಎಪಿ ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಉದ್ಯೋಗ ಭರವಸೆ ನೀಡಿದ್ದರು. ಕಳೆದ ಏಳು ವರ್ಷಗಳಲ್ಲಿ ದೆಹಲಿಯಲ್ಲಿ 12 ಲಕ್ಷ ಜನರಿಗೆ ಉದ್ಯೋಗ ಮತ್ತು ಪಂಜಾಬ್‌ನಲ್ಲಿ ಒಂದು ವರ್ಷದಲ್ಲಿ 28,000 ಜನರಿಗೆ ಉದ್ಯೋಗ ನೀಡಿರುವುದಾಗಿ ಹೇಳಿದ್ದರು.

2015ರಿಂದ 2013ರವರೆಗೆ ಎಎಪಿ ಸರ್ಕಾರ ದೆಹಲಿಯಲ್ಲಿ ನೀಡಿದ 440 ಉದ್ಯೋಗಗಳ ಪೈಕಿ, 2015ರಲ್ಲಿ 176, 2016ರಲ್ಲಿ 102, 2017ರಲ್ಲಿ 66, 2018ರಲ್ಲಿ 68 ಮತ್ತು 2020ರಲ್ಲಿ 28 ಉದ್ಯೋಗಗಳನ್ನಷ್ಟೇ ನೀಡಿದೆ ಎಂದು ಬಿಜೆಪಿ ಶಾಸಕ ಅಜಯ್ ಮಹಾವರ್ ಹೇಳಿದ್ದಾರೆ.

2019, 2021, 2022 ಮತ್ತು 2023ರಲ್ಲಿ ಒಂದೇ ಒಂದು ಉದ್ಯೋಗವನ್ನು ನೀಡಿಲ್ಲ ಎಂದು ಅವರು ಉಲ್ಲೇಖ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT