ತಿರುಪ್ಪೂರ್: ಎನ್ಡಿಎ ಸರ್ಕಾರ ಉತ್ತಮ ಕೆಲಸಗಳು ಕೆಲವು ಜನರಿಗೆ ಬೇಸರವನ್ನುಂಟು ಮಾಡಿದೆ.ಅವರ ಈ ಬೇಸರ ಹತಾಶೆಗೆ ತಿರುಗಿದಾಗ ಅವರುನನ್ನನ್ನು ನಿಂದಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ತಮಿಳುನಾಡಿನ ತಿರುಪ್ಪೂರ್ಗೆ ಬಂದಿಳಿದ ಮೋದಿ ಹಲವಾರು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿದ ನಂತರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.

ಮೋದಿ ಭಾಷಣದ ಹೈಲೈಟ್ಸ್

* ನಾನು ತಿರುಪ್ಪೂರ್ನಈ ಮಣ್ಣಿಗೆ ನಮಸ್ಕರಿಸುತ್ತೇನೆ.ಇದು ಧೀರರ ನೆಲ, ರಾಷ್ಟ್ರ ಧ್ವಜಕ್ಕಾಗಿ ತಮ್ಮ ಪ್ರಾಣವನ್ನರ್ಪಿಸಿದ ತಿರುಪ್ಪೂರ್ ಕುಮಾರನ್ ಅವರ ನೆಲ ಇದು.ದೇಶಕ್ಕೆ ಧೀರತೆಯ ಪ್ರೇರಣೆ ನೀಡುವ ಧೀರನ್ ಚಿನ್ನಮಲೈ ಅವರ ನಾಡು ಎಂದು ಮೋದಿ ಭಾಷಣ ಆರಂಭಿಸಿದ್ದರು.

* NaMo Again ಎಂಬ ಸಂದೇಶವಿರುವ ಟಿ-ಶರ್ಟ್, ನಮೋ ವಾಣಿಜ್ಯ ಸರಕುಗಳೆಲ್ಲಾ ತಿರುಪ್ಪೂರ್ನಲ್ಲಿಯೇ ತಯಾರಾಗುತ್ತವೆ ಎಂದಿದ್ದಾರೆ ಮೋದಿ.

* ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಇಂಟಗ್ರೇಟೆಡ್ ಕಟ್ಟಡವನ್ನು ಉದ್ಘಾಟಿಸಿದ ಮೋದಿ, ಈ ವಿಮಾನ ನಿಲ್ದಾಣದಲ್ಲಿ 3000 ಪ್ರಯಾಣಿಕರಿಗೆ ವ್ಯವಸ್ಥೆ ಇದೆ ಎಂದಿದ್ದಾರೆ.

* ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ರಕ್ಷಣಾ ವಲಯದಲ್ಲಿ ಹಗರಣ ಮಾಡಿ ದೇಶಕ್ಕೆ ಹಾನಿಯುಂಟುಮಾಡಿದೆ.ಕಾಂಗ್ರೆಸ್ ಭಾರತೀಯ ಸೇನೆಯನ್ನು ಅವಮಾನಿಸಿದೆ, ಅವರು ನಿರ್ದಿಷ್ಟ ದಾಳಿಯನ್ನೇ ಶಂಕಿಸಿದ್ದರು.

* ಇತ್ತೀಚಿನ ಕೇಂದ್ರ ಬಜೆಟ್ನಲ್ಲಿ ಪ್ರಧಾನ್ ಮಂತ್ರಿ ಶ್ರಮ್ಯೋಗಿ ಮನ್ ಧನ್ ಯೋಜನೆ ಎಂಬ ಐತಿಹಾಸಿಕ ಯೋಜನೆಯನ್ನು ಘೋಷಿಸಲಾಯಿತು. ಈ ಯೋಜನೆ ಕಾರ್ಖಾನೆ, ಮಿಲ್,ಕಂಪವಿ ಮತ್ತು ಸಣ್ಣ ಉದ್ಯಮಗಳಲ್ಲಿ ಕೆಲಸ ಮಾಡುವರಿಗಾಗಿ ಇರುವ ಯೋಜನೆಯಾಗಿದೆ.ಹಿಂದಿನ ಸರ್ಕಾರಕ್ಕಿಂತ ಎನ್ಡಿಎ ಸರ್ಕಾರದ ಕೆಲಸದ ರೀತಿ ಭಿನ್ನವಾಗಿದೆ.

* ನಮ್ಮ ಸರ್ಕಾರ ಒಆರ್ಒಪಿ (ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ)ಯನ್ನು ಜಾರಿಗೆ ತಂದೆವು.ಇಷ್ಟು ವರ್ಷ ಅಧಿಕಾರದಲ್ಲಿದ್ದ ಸರ್ಕಾರ ರಕ್ಷಣಾ ವಲಯದ ಬಗ್ಗೆ ಯೋಚಿಸಿಯೇ ಇಲ್ಲ.ಅವರ ಪಾಲಿಗೆ ಈ ವಲಯ ಒಪ್ಪಂದ ಮತ್ತು ತಮ್ಮ ಸ್ನೇಹಿತರಿಗೆ ಬೆಂಬಲ ನೀಡುವ ವಲಯ ಅಷ್ಟೇ.

* ನಮ್ಮ ದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದುವಲ್ಲಿ ಸ್ವಯಂ ಪರ್ಯಾಪ್ತ ಆಗಬೇಕೆಂಬ ಕನಸು ನಮಗಿದೆ.ನಾವು ಸೇನೆಗೆ ಬೆಂಬಲ ನೀಡುತ್ತಾ ನಮ್ಮ ದೇಶವನ್ನು ಸುರಕ್ಷಿತವಾಗಿರಿಸುತ್ತಿದ್ದೇವೆ.

* ಸೇನೆಯನ್ನು ಅವಮಾನಿಸುವ ಅವಕಾಶವನ್ನು ಕಾಂಗ್ರೆಸ್ ಎಂದಿಗೂ ಬಿಟ್ಟುಕೊಟ್ಟಿಲ್ಲ.ಕೆಲವು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ನೇತಾರರೊಬ್ಬರು ಸೇನಾ ಮುಖ್ಯಸ್ಥರನ್ನು ನಿಂದಿಸಿದ್ದರು.

* ಭಾರತ್ಮಾಲಾ ಮೊದಲಾದ ಯೋಜನೆಗಳು ದೇಶದ ಮೂಲೆ ಮೂಲೆಗಳ ನಡುವೆ ಸಂಪರ್ಕ ಕಲ್ಪಿಸುತ್ತವೆ. ರಸ್ತೆ ನಿರ್ಮಾಣವೂ ದುಪ್ಪಟ್ಟು ಆಗಿದೆ .

* ಎನ್ಡಿಎ ಸರ್ಕಾರ ಪ್ರತಿ ಭಾರತೀಯರ ಪರವಾಗಿದೆ, ದೇಶ ಉತ್ತಮವಾಗಿದ್ದರೆ ಅಭಿವೃದ್ಧಿಯೂ ಆಗುತ್ತದೆ.

* 2022ರ ವೇಳೆಗೆ ಎಲ್ಲರಿಗೂ ಸೂರು ಎಂಬ ಉದ್ದೇಶದಿಂದ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಇಂದು ಇಡೀ ಜಗತ್ತು ಭಾರತದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದೆ, ಜನರ ಕೌಶಲ ಮತ್ತು ಶಕ್ತಿಯಿಂದ ಈ ಅಭಿವೃದ್ಧಿ ಸಾಧ್ಯವಾಗಿದೆ.

* ಉತ್ತಮ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತರಲಾಗಿದೆ.

* ತಮಿಳುನಾಡಿನ ಚತುರ ಸಚಿವರ ಬಗ್ಗೆ ಮಾತನಾಡೋಣ, The Recounting Minister. ಈ ಜಗತ್ತಿನಲ್ಲಿಯೇ ಅವರು ತುಂಬಾ ಬುದ್ಧಿವಂತ ಸಚಿವ ಎಂದುಕೊಂಡಿದ್ದಾರೆ. Mr. Recounting Minister ಅವರು ನಿಮ್ಮ ಮೂದಲಿಕೆ ಬೇಡ ಎಂದು ನಿಮ್ಮನ್ನು ನಿರಾಕರಿಸಿದ್ದಾರೆ.

* ವಿಪಕ್ಷಗಳು ನನ್ನನ್ನು ನಿಂದಿಸುತ್ತಿರುವುದರಿಂದ ಅವರಿಗೆ ಟಿವಿಯಲ್ಲಿಜಾಗ ಸಿಗುತ್ತಿದೆ.

* ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸರ್ಕಾರವನ್ನು ಕೆ. ಕಾಮರಾಜ್ ಅವರು ಬಯಸಿದ್ದರು. ದೆಹಲಿಯಲ್ಲಿರುವ ಸರ್ಕಾರ ಭ್ರಷ್ಟಾಚಾರದ ವಿರುದ್ಧವಿದೆ.

* ವಿಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಉದ್ದೇಶ ಅಭಿವೃದ್ಧಿ ಅಲ್ಲ, ಅವರದ್ದೇನಿದ್ದರೂ ಮೋದಿ ವಿರೋಧಿ ಮೈತ್ರಿ.

* ವಿಪಕ್ಷಗಳು ಭಯ ಹುಟ್ಟಿಸುವುದರಲ್ಲಿ ಮಾತ್ರ ನಿಷ್ಣಾತರು

* ಎನ್ಡಿಎಯ ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಯ ಮೂಲಕ ₹7 ಲಕ್ಷದಿಂದ ₹50 ಸಾವಿರ ಕೋಟಿಯಷ್ಟು ದುಡ್ಡು 10 ವರ್ಷದಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

*ಸಾಮಾಜಿಕ ನ್ಯಾಯದ ಜತೆ ನಮ್ಮ ಸರ್ಕಾರ ರಾಜಿ ಮಾಡಿಕೊಂಡಿದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ ನೋಡೋಣ ಎಂದು ಮೋದಿ ಸವಾಲೆಸೆದಿದ್ದಾರೆ.

*ಭಾರತ ಮತ್ತು ತಮಿಳುನಾಡನ್ನು ಉತ್ತುಂಗಕ್ಕೇರಿಸುವುದಕ್ಕೆ ಜತೆಯಾಗಿ ಕಾರ್ಯವೆಸಗೋಣ ಎಂದು ಮೋದಿ ಜನತೆಗೆ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.