ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ ಪ್ರಯುಕ್ತ ಸಂಗಮದಲ್ಲಿ 9 ಲಕ್ಷಕ್ಕೂ ಅಧಿಕ ಜನರಿಂದ ಪುಣ್ಯ ಸ್ನಾನ

ಮಹಾ ಶಿವರಾತ್ರಿ ಪ್ರಯುಕ್ತ ಉತ್ತರ ಪ್ರದೇಶದ ಪ್ರಯಾಗರಾಜ್‌ನ ಪವಿತ್ರ ಗಂಗಾ ಸಂಗಮದಲ್ಲಿ ಶುಕ್ರವಾರ ಸುಮಾರು 9.70 ಲಕ್ಷಕ್ಕೂ ಅಧಿಕ ಜನ ಪುಣ್ಯ ಸ್ನಾನ ಮಾಡಿದರು.
Published 9 ಮಾರ್ಚ್ 2024, 3:30 IST
Last Updated 9 ಮಾರ್ಚ್ 2024, 3:30 IST
ಅಕ್ಷರ ಗಾತ್ರ

ಪ್ರಯಾಗರಾಜ್, ಉತ್ತರಪ್ರದೇಶ: ಮಹಾ ಶಿವರಾತ್ರಿ ಪ್ರಯುಕ್ತ ಉತ್ತರ ಪ್ರದೇಶದ ಪ್ರಯಾಗರಾಜ್‌ನ ಪವಿತ್ರ ಗಂಗಾ ಸಂಗಮದಲ್ಲಿ ಶುಕ್ರವಾರ ಸುಮಾರು 9.70 ಲಕ್ಷಕ್ಕೂ ಅಧಿಕ ಜನ ಪುಣ್ಯ ಸ್ನಾನ ಮಾಡಿದರು.

ಸಂಗಮದ ಮಾಘ ಮೇಳದ ಉಸ್ತುವಾರಿ ಅಧಿಕಾರಿಗಳು ಈ ಮಾಹಿತಿ ತಿಳಿಸಿದ್ದಾರೆ.

ಸದ್ಯ ಸಂಗಮದಲ್ಲಿ ಮಾಘ ಮೇಳ ನಡೆಯುತ್ತಿದ್ದು ಶಿವರಾತ್ರಿ ದಿನ ಬೆಳಿಗ್ಗೆ 6.30ರಿಂದ ಸಂಜೆ 10 ಗಂಟೆಯವರೆಗೆ ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ.

ಈ ಸಾರಿ ಪುಣ್ಯ ಸ್ನಾನದ ಘಾಟ್‌ಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT