ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಮೇಲೆ ದಾಳಿ: ಕಾಂಗ್ರೆಸ್, ಬಿಜೆಪಿ ವಿರುದ್ಧ ಒವೈಸಿ ವಾಗ್ದಾಳಿ

Published 10 ಆಗಸ್ಟ್ 2023, 13:51 IST
Last Updated 10 ಆಗಸ್ಟ್ 2023, 13:51 IST
ಅಕ್ಷರ ಗಾತ್ರ

ನವದೆಹಲಿ: ಮುಸ್ಲಿಮರು ತುಳಿತಕ್ಕೊಳಗಾದಾಗ ‘ದುಕಾಂದರ್’ ಅಥವಾ ‘ಚೌಕೀದಾರ್‌ ಬಾಯಿ ತೆರೆಯುವುದಿಲ್ಲ ಎಂದು ವಿರೋಧ ಪಕ್ಷ ಹಾಗೂ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ  ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್‌ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಕುರಿತು ಮಾತನಾಡಿದ ಒವೈಸಿ, ಎರಡೂ ಕಡೆಯವರೂ ಅಲ್ಪಸಂಖ್ಯಾತರ ಸಮಾಧಿಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

‘ಈ ದೇಶದಲ್ಲಿ ಎರಡು ರಂಗಗಳಿವೆ. ಒಬ್ಬರು ‘ದುಕಾಂದರ್’ ಮತ್ತು ಇನ್ನೊಬ್ಬರು ‘ಚೌಕಿದಾರ್’. ನಾವು ತುಳಿತಕ್ಕೊಳಗಾದಾಗ, ಇಬ್ಬರೂ ಬಾಯಿ ತೆರೆಯುವುದಿಲ್ಲ. ಯುಎಪಿಎ (ತಿದ್ದುಪಡಿ) ಕಾನೂನನ್ನು  ಅಮಿತ್ ಶಾ ತಂದರು ಮತ್ತು ಈ ‘ದುಕಾಂದರ್’ ಅದನ್ನು ಅನುಮೋದಿಸಿದರು’ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ರಂಗವನ್ನು ‘ಚೌಕೀದಾರ್’ ಮತ್ತು ವಿರೋಧ ಪಕ್ಷ  ಇಂಡಿಯಾವನ್ನು ‘ದುಕಾಂದರ್’ ಎಂದು ಒವೈಸಿ ಉಲ್ಲೇಖಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT