ನವದೆಹಲಿ: ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಟ್ರೋಲ್ಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು (ಎನ್ಸಿಡಬ್ಲ್ಯೂ) ಕಿಡಿಕಾರಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ 'ಜನರು ಮುಸ್ಲಿಮರು ಮತ್ತು ಕಾಶ್ಮೀರಿಗರನ್ನು ಗುರಿಯಾಗಿಸುವುದನ್ನು ಸಹಿಸುವುದಿಲ್ಲ' ಎಂದು ಹಿಮಾಂಶಿ ನರ್ವಾಲ್ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟ್ರೋಲ್ಗೆ ಗುರಿಯಾಗಿತ್ತು.
.ಸತತ 11ನೇ ದಿನ ಪಾಕ್ನಿಂದ ಕದನ ವಿರಾಮ ಉಲ್ಲಂಘನೆ: ಅಪ್ರಚೋದಿತ ಗುಂಡಿನ ದಾಳಿ.ಚಿಕ್ಕಮಗಳೂರು ಬಂದ್: ತೆರೆಯದ ಅಂಗಡಿ-ಮುಂಗಟ್ಟು.
ಈ ಸಂಬಂಧ ಎನ್ಸಿಡಬ್ಲ್ಯೂ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಭಯೋತ್ಪಾದನಾ ದಾಳಿಯಿಂದಾಗಿ ದೇಶ ನೋವಿನಲ್ಲಿದೆ. ಈ ನಡುವೆ ಮಹಿಳೆಯ ಹೇಳಿಕೆ ಕುರಿತು ಟ್ರೋಲ್ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. 'ಮಹಿಳೆಯರ ವೈಯಕ್ತಿಕ ಜೀವನದ ಆಧಾರದ ಮೇಲೆ ಅವರನ್ನು ಟ್ರೋಲ್ ಮಾಡುವುದು ಸರಿಯಲ್ಲ. ಪ್ರತಿಯೊಬ್ಬ ಮಹಿಳೆಯ ಘನತೆ ಮತ್ತು ಗೌರವವು ಮೌಲ್ಯಯುತವಾದ್ದದ್ದು' ಎಂದು ಹೇಳಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಸಾಂವಿಧಾನಿಕ ಮಿತಿ ಹಾಗೂ ನಾಗರಿಕ ಚರ್ಚೆಯೊಳಗೆ ಇರಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.
.ಸಿಕಂದರ್ ಸೋಲಿಗೆ ಸಲ್ಮಾನ್ ಹೊಣೆಯಲ್ಲ: ನಟ ನವಾಜುದ್ದೀನ್.ಅತ್ಯಾಚಾರ ಆರೋಪ | ನಟ ಅಜಾಜ್ ಖಾನ್ ವಿರುದ್ಧ ಎಫ್ಐಆರ್ ದಾಖಲು .IPL 2025 | SRH vs DC: ಗೆಲುವಿನ ಹಳಿಗೆ ಮರಳಲು ಡೆಲ್ಲಿ ತವಕ.ಮಹಿಳಾ ಮತ: ಮಹಿಳೆ ಮೇಲೆ ದೌರ್ಜನ್ಯ ನಡೆಯುವುದು ಕುಟುಂಬದಿಂದಲೇ ಹೆಚ್ಚು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.