ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡನಾಡು ಹತ್ಯೆ ಪ್ರಕರಣ: ಆ.1ರಂದು ಪನ್ನೀರ್‌ಸೆಲ್ವಂ ಬಣದಿಂದ ಪ್ರತಿಭಟನೆ

Published 11 ಜುಲೈ 2023, 15:26 IST
Last Updated 11 ಜುಲೈ 2023, 15:26 IST
ಅಕ್ಷರ ಗಾತ್ರ

ಚೆನ್ನೈ: ಕೊಡನಾಡುವಿನಲ್ಲಿ 2017ರಲ್ಲಿ ನಡೆದಿದ್ದ ಹತ್ಯೆ ಮತ್ತು ದರೋಡೆ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಬೇಕೆಂದು ಒತ್ತಾಯಿಸಿ ಆಗಸ್ಟ್‌ 1ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಐಎಡಿಎಂಕೆಯ ಪದಚ್ಯುತ ಮುಖಂಡ ಒ.ಪನ್ನೀರ್‌ಸೆಲ್ವಂ ಬಣ ಹೇಳಿದೆ.

ಡಿಎಂಕೆ ಸರ್ಕಾರವು ಈ ಪ್ರಕರಣದ ತನಿಖೆಗೆ ಮಹತ್ವ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪನ್ನೀರ್‌ಸೆಲ್ವಂ ಆಪ್ತ ಆರ್‌. ವೈತಿಲಿಂಗಂ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪನ್ನೀರ್‌ಸೆಲ್ವಂ ಬಣವು ಡಿಎಂಕೆಯ ‘ಬಿ’ ಟೀಮ್‌ನಂತೆ ವರ್ತಿಸುತ್ತಿದ್ದು, ಈ ಪ್ರಕರಣದಲ್ಲಿ ಸರ್ಕಾರಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಪ್ರತಿಭಟನೆಗೆ ಕರೆ ನೀಡಿದೆ ಎಂದು ಎಐಎಡಿಎಂಕೆ ಆರೋಪಿಸಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರಿಗೆ ಸೇರಿದ್ದ ಕೊಡನಾಡು ಎಸ್ಟೇಟ್‌ನ ಕಾವಲುಗಾರರೊಬ್ಬರನ್ನು ಕೊಲೆ ಮಾಡಿ ಇನ್ನೊಬ್ಬರ ಮೇಲೆ ಹಲ್ಲೆ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT