ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಆಂತರಿಕ ಸಮಸ್ಯೆ, ಅದನ್ನು ಅಂತರ ರಾಷ್ಟ್ರೀಯ ಸಮಸ್ಯೆ ಮಾಡಿದ್ದು ಬಿಜೆಪಿ

Last Updated 18 ನವೆಂಬರ್ 2019, 7:17 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು ಕೆಲವು ತಿಂಗಳುಗಳ ಹಿಂದೆ ಅಗಲಿದ ಮಾಜಿ ಕೇಂದ್ರ ಸಚಿವರಾದಅರುಣ್ ಜೇಟ್ಲಿ ಮತ್ತು ರಾಮ್ ಜೇಠ್ಮಲಾನಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಮಾಜಿ ಸಿಪಿಐ ನೇತಾರ ಗುರುದಾಸ್ ಗುಪ್ತಾ ಅವರಿಗೆ ಲೋಕಸಭೆ ಮತ್ತು ರಾಜ್ಯಸಭೆ ಸಂತಾಪಸಲ್ಲಿಸಿದೆ.

ಇದನ್ನೂ ಓದಿ:ನಾವು ಎಲ್ಲ ಸಮಸ್ಯೆಗಳನ್ನು ಆಲಿಸಿ, ಚರ್ಚಿಸಲು ಸಿದ್ಧ: ನರೇಂದ್ರ ಮೋದಿ

ಕ್ಷಣಕ್ಷಣದ ಮಾಹಿತಿ

12: 12 - ಮಧ್ಯಾಹ್ನ 2 ಗಂಟೆಯವರೆಗೆ ರಾಜ್ಯ ಸಭಾ ಕಲಾಪ ಮುಂದೂಡಿಕೆ
12:10 - ಫಾರೂಕ್ ಅಬ್ದುಲ್ಲಾರನ್ನು ಬಿಡುಗಡೆ ಮಾಡಿ
ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದಅಧೀರ್ ರಂಜನ್ ಚೌಧರಿ, ಜಮ್ಮು ಕಾಶ್ಮೀರದಲ್ಲಿ ಬಂಧಿತರಾಗಿರುವ ಡಾ. ಫಾರೂಕ್ ಅಬ್ದುಲ್ಲಾ ಮತ್ತು ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಪಿ.ಚಿದಂಬರಂ ಅವರನ್ನು ಬಿಡುಗಡೆ ಎಂದು ಒತ್ತಾಯಿಸಿದ್ದಾರೆ.
ಪ್ರಧಾನಿ, ರಕ್ಷಣಾ ಸಚಿವರು, ಗೃಹ ಸಚಿವರು ಮತ್ತುವಿದೇಶಾಂಗ ವ್ಯವಹಾರಗಳ ಸಚಿವರು ಈಗ ಇಲ್ಲಿ ಉಪಸ್ಥಿತರಿಲ್ಲ. ಡಾ. ಅಬ್ದುಲ್ಲಾ ಅವರನ್ನು ಬಂಧಿಸಿಲ್ಲ ಎಂದು ಅಮಿತ್ ಶಾ ಅವರು ಆಗಸ್ಟ್ ತಿಂಗಳಲ್ಲಿ ಹೇಳಿದ್ದರು. ಆದರೆ 108 ದಿನಗಳು ಕಳೆದರೂ ಅಬ್ದುಲ್ಲಾ ಅವರು ಹೊರಗೆ ಬಂದಿಲ್ಲ. ಇದಕ್ಕೆ ಕಾರಣವೇನು? ನಮ್ಮ ನಾಯಕ ರಾಹುಲ್ ಗಾಂಧಿಯವರನ್ನು ಕಣಿವೆ ರಾಜ್ಯಕ್ಕೆ ಹೋಗಲು ನೀವು ಬಿಡುವುದಿಲ್ಲ. ಆದರೆ ಯುರೋಪಿನ ನಾಯಕರಿಗೆ ಅನುಮತಿ ನೀಡುತ್ತೀರಿ. ಕಾಶ್ಮೀರ ನಮ್ಮ ಆಂತರಿಕ ಸಮಸ್ಯೆ ಆದರೆ ಬಿಜೆಪಿ ಅದನ್ನು ಅಂತರರಾಷ್ಟ್ರೀಯ ಸಮಸ್ಯೆಯಾಗಿ ಮಾಡಿತು ಎಂದಿದ್ದಾರೆ.

ಸೈಕಲ್‌ನಲ್ಲಿ ಬಂದ ಗುಜರಾತಿನ ಬಿಜೆಪಿ ಸಂಸದ

ಗುಜರಾತಿನ ಬಿಜೆಪಿ ಸಂಸದ ಮನುಸುಖ್ ಮಾಂಡವಿಯ ಅವರು ಸೈಕಲ್ ತುಳಿದುಕೊಂಡು ಸಂಸತ್ ಅಧಿವೇಶನಕ್ಕೆ ಆಗಮಿಸಿದ್ದಾರೆ

ನೂತನ ಸಂಸದರ ಪ್ರಮಾಣ ವಚನ,ಅಗಲಿದ ಗಣ್ಯರಿಗೆ ಸಂತಾಪ
ಲೋಕಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸಂಸದರಾದ ಬಿಹಾರ ಸಮಸ್ತಿಪುರ್ ಲೋಕಸಭಾ ಕ್ಷೇತ್ರದ ಸಂಸದ ಪ್ರಿನ್ಸ್ ರಾಜ್ , ಮಧ್ಯ ಪ್ರದೇಶ ಶಹದೋಲ್‌ ಕ್ಷೇತ್ರದ ಹಿಮಾದ್ರಿ ಸಿಂಗ್, ಮಹಾರಾಷ್ಟ್ರಸತಾರಾದ ಶ್ರೀನಿವಾಸ್ ದಾದಾಸಾಹೇಬ್ ಪಾಟೀಲ್, ತಮಿಳಿನಾಡಿನ ವೆಲ್ಲೂರ್ ಕ್ಷೇತ್ರದ ಡಿಎಂ ಕದಿರ್ ಆನಂದ್ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಾದನಂತರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿಲು ಹೇಳಿದ್ದಾರೆ.

ರಾಜ್ಯಸಭಾ ಅಧ್ಯಕ್ಷ ಪಿ.ವೆಂಕಯ್ಯ ನಾಯ್ಡು ಅವರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಅಧಿವೇಶನ ಆರಂಭಿಸಿದ್ದಾರೆ.

ಸಾಮಾನ್ಯ ಜನರ ಆಸಕ್ತಿಯನ್ನು ಪರಿಗಣಿಸಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿ
ಸಂಸತ್ತಿನಲ್ಲಿ ಚರ್ಚೆ , ಸಂವಾದ ಮತ್ತು ಮಾತುಕತೆಗಳು ನಡೆಯಬೇಕು. ಸರ್ಕಾರ ಅಧಿವೇಶವನ್ನು ಸುಗಮವಾಗಿನಡೆಸಿದರೆ ವಿಪಕ್ಷಗಳಿಗೆ ತಮ್ಮಅಭಿಪ್ರಾಯಗಳನ್ನು ಮಂಡಿಸಲು ಸಾಧ್ಯ ಎಂದು ಕಾಂಗ್ರೆಸ್ ನೇತಾರ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಗೌರವ್ ಗೊಗೊಯಿ ಮೌನ ಪ್ರತಿಭಟನೆ

ವಾಯುಮಾಲಿನ್ಯ ಸಮಸ್ಯೆ ಬಗ್ಗೆ ಗಮನ ಸೆಳೆಯಲು ಅಸ್ಸಾಂನ ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಅವರು ಸಂಸತ್ತಿನ ಗಾಂಧಿ ಪ್ರತಿಮೆಯ ಬಳಿ ಮೌನ ಪ್ರತಿಭಟನೆ ನಡೆಸಿದ್ದಾರೆ.

ಸಂಸತ್ತಿಗೆ ಆಗಮಿಸಿದ ಮೇರಿಕೋಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT