ಮುಂಬೈ: ಜೆಟ್ ಏರ್‌ವೇಯ್ಸ್ ಸಿಬ್ಬಂದಿ ವಿಮಾನದೊಳಗಿನ ತಾಂತ್ರಿಕ ದೋಷದ ಕಾರಣ ಪ್ರಯಾಣಿಕರ ಮೂಗು, ಕಿವಿಯಲ್ಲಿ ರಕ್ತ ಸೋರಿಕೆಯಾಗಿದ್ದು, ಇನ್ನು ಕೆಲವರಿಗೆ ತಲೆನೋವು ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಮುಂಬೈಯಿಂದ ಜೈಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು,ಪ್ರಯಾಣಿಕರನ್ನು ಮುಂಬೈ ವಿಮಾನ ನಿಲ್ದಾಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವೇಳೆ ಹಾಜರಿದ್ದ ಸಿಬ್ಬಂದಿಯ ವಿರುದ್ಧ ವಿಮಾನ ಅಪಘಾತ ತನಿಖಾ ದಳ (ಎಎಐಬಿ) ತನಿಖೆ ಕೈಗೊಂಡಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಉಪನಿರ್ದೇಶಕ ಜನರಲ್ ಲಲಿತ್ ಗುಪ್ತಾ ತಿಳಿಸಿದ್ದಾರೆ.
Panic situation due to technical fault in @jetairways 9W 0697 going from Mumbai to Jaipur. Flt return back to Mumbai after 45 mts. All passengers are safe including me. pic.twitter.com/lnOaFbcaps
— Darshak Hathi (@DarshakHathi) September 20, 2018
ಘಟನೆ ವಿವರ:
ಜೆಟ್ ಏರ್‌ವೇಯ್ಸ್ 9W 697 ವಿಮಾನವು ಗುರುವಾರ ಮುಂಬೈಯಿಂದ ಜೈಪುರಕ್ಕೆ ಹೊರಟಿತ್ತು. ಇದರಲ್ಲಿ 166 ಮಂದಿ ಪ್ರಯಾಣಿಕರಿದ್ದರು.
ಈ ವೇಳೆ ವಿಮಾನ ಸಿಬ್ಬಂದಿ ಕ್ಯಾಬಿನ್ ಒತ್ತಡ ನಿರ್ವಹಿಸುವ ಸ್ವಿಚ್ ಹಾಕಲು ಮರೆತಿದ್ದಾರೆ. ಇದರಿಂದ ಆಮ್ಲಜನಕ ಮುಖವಾಡಗಳು ಸಿಗುವಲ್ಲಿ ವಿಳಂಬವಾಗಿದೆ. ಇದರ ಪರಿಣಾಮ 30 ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತ ಕಾಣಿಸಿಕೊಂಡಿದೆ.
ಇನ್ನಷ್ಟು:ಜೆಟ್ ಏರ್‌ವೇಸ್ ಅವಘಡ; ಗಾಳಿಯ ಒತ್ತಡ ಕಾಯ್ದುಕೊಳ್ಳದಿದ್ದರೆ ಪ್ರಾಣಕ್ಕೇ ಕುತ್ತು
ಈಗಾಗಲೇ ಪರಿಸ್ಥಿತಿ ಸುಧಾರಿಸಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಕಿ, ಮೂಗಿನಲ್ಲಿ ರಕ್ತಸೋರಿಕೆಯಾದವರಿಗೆ ಸಿಬ್ಬಂದಿ ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ತುರ್ತಾಗಿ ತೆರಳಬೇಕಾದ ಪ್ರಯಾಣಿಕರಿಗೆ ಬೇರೊಂದು ವಿಮಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರಿಗಾದದ ಅನಾನುಕೂಲತೆಗೆ ಜೆಟ್ ಏರ್‌ವೇಯ್ಸ್ ಕ್ಷಮೆಯಾಚಿಸುತ್ತದೆ ಎಂದು ಜೆಟ್‌ಏರ್ ವೇಯ್ಸ್ ಹೇಳಿಕೆ ಬಿಡುಗಡೆ ಮಾಡಿದೆ.
ಈ ಸಂಬಂಧ ಸತೀಶ್ ನಾಯರ್ ಎಂಬುವರು ಮೂಗಿನಲ್ಲಿ ರಕ್ತಸೋರಿಕೆಯಾದರೂ ವಿಮಾನದ ಸಿಬ್ಬಂದಿ ಸಹಾಯಕ್ಕೆ ಬರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
@jetairways Flight 9W 697 made an emergency landing back in Mumbai. Airplane lost pressure immediately after taking off...scores of passengers including me bleeding from nose....no staff to help...no announcement on board to wear the oxygen mask.passengersafety completelyignored pic.twitter.com/vO9O95aMCP
— Satish Nair (@satishnairk) September 20, 2018
1. ವಿಮಾನ ಟೇಕಾಫ್ ಆದ ನಂತರ ಕ್ಯಾಬಿನ್ನ ಗಾಳಿಯ ಒತ್ತಡ ಕಾಯ್ದುಕೊಳ್ಳುವ ವ್ಯವಸ್ಥೆ ಚಾಲೂ ಮಾಡಲು ಮರೆತ ಸಿಬ್ಬಂದಿ. ಕೆಲವೇ ನಿಮಿಷಗಳಲ್ಲಿ ವಿಮಾನದ ಒಳಗೆ ಗಾಳಿಯ ಒತ್ತಡ ಕುಸಿದಿದೆ. ಇದರಿಂದ ಪ್ರಯಾಣಿಕರಲ್ಲಿ ವಿಪರೀತವಾದ ತಲೆನೋವು, ಕಿವಿನೋವು ಕಾಣಿಸಿಕೊಂಡಿದೆ. ಗಾಬರಿ ಮತ್ತು ನೋವಿನಿಂದ ಕೆಲವು ಪ್ರಯಾಣಿಕರು ಕಿರುಚಿಕೊಂಡಿದ್ದಾರೆ
2. ನಂತರದ ಕೆಲವೇ ಕ್ಷಣಗಳಲ್ಲಿ ಹಲವು ಪ್ರಯಾಣಿಕರ ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿದೆ
3. ಅದೇ ಸಮಯದಲ್ಲಿ ಆಮ್ಲಜನಕದ ಮಾಸ್ಕ್ಗಳು ತೆರೆದುಕೊಂಡಿವೆ. ಕೆಲವು ಪ್ರಯಾಣಿಕರು ಅವನ್ನು ಧರಿಸಿಕೊಂಡಿದ್ದಾರೆ. ಧರಿಸಿಕೊಂಡವರ ಮೂಗಿನಿಂದ ಬಂದ ರಕ್ತ ಮಾಸ್ಕ್ನ ನಳಿಕೆಯಲ್ಲಿ ಹಾದು ಹೋಗಿದೆ
4. ಆಮ್ಲಜನಕದ ಮಾಸ್ಕ್ಗಳನ್ನು ಧರಿಸಲು ವಿಳಂಬ ಮಾಡಿದ ಪ್ರಯಾಣಿಕರಲ್ಲಿ ಕೆಲವರ ಮೂಗು ಮತ್ತು ಕಿವಿಗಳಲ್ಲಿ ರಕ್ತಸ್ರಾವವಾಗಿದೆ
166 ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ
30 ಮೂಗು–ಕಿವಿಯಲ್ಲಿ ರಕ್ತ ಸೋರಿದವರು, ವಿಪರೀತದ ತಲೆನೋವಿಗೆ ತುತ್ತಾದವರು
5 ತಾತ್ಕಾಲಿಕ ಕಿವುಡುತನಕ್ಕೆ ತುತ್ತಾಗಿರುವವರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.