ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯವರ ಸುಳ್ಳು, ದ್ವೇಷಪೂರಿತ ಹೇಳಿಕೆಗಳಿಗೆ ಜನರು ಮರುಳಾಗುವುದಿಲ್ಲ: ಖರ್ಗೆ

Published 23 ನವೆಂಬರ್ 2023, 10:06 IST
Last Updated 23 ನವೆಂಬರ್ 2023, 10:06 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳು, ದ್ವೇಷಪೂರಿತ ಹೇಳಿಕೆಳಿಗೆ ಜನರು ಮರುಳಾಗುವುದಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು,‘ ಯೋಧರು ಹಾಗೂ ನಾಯಕರು ಜನ್ಮತಾಳಿದ ಪವಿತ್ರ ಭೂಮಿ ರಾಜಸ್ಥಾನದಲ್ಲಿ ಜನರು ಕಾಂಗ್ರೆಸ್‌ ಸರ್ಕಾರದ ಜನಪರ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ‘ ಎಂದರು.

'ಪ್ರಧಾನ ಮೋದಿ ಅವರು ಟೊಳ್ಳು ಹಾಗೂ ಸಮಾಜವನ್ನು ಒಡೆಯುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜಸ್ಥಾನದ ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಪೂರಕ ವಾತವರಣವಿದೆ' ಎಂದು ಖರ್ಗೆ ತಿಳಿಸಿದ್ದಾರೆ.

'ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಏಳು ಗ್ಯಾರಂಟಿ ಯೋಜನೆಗಳು ಘೋಷಿಸಿದ್ದು, ಬಿಜೆಪಿ ಭಯಬೀತಗೊಂಡಿದೆ' ಎಂದು ವ್ಯಂಗ್ಯವಾಡಿದರು.

'ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, ಸಾಮಾಜಿಕ ನ್ಯಾಯ, ಸೇರಿದಂತೆ ಆರ್ಥಿಕ ಸಬಲೀಕರಣ ಅಂಶಗಳಿಗೆ ಬಿಜೆಪಿ ಭಯಗೊಂಡಿದೆ. ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರು ಕೇವಲ ಟೊಳ್ಳು ಹಾಗೂ ಸಮಾಜ ವಿಭಜಿಸುವ ಭಾಷಣಗಳನ್ನು ಮಾಡುತ್ತಿದ್ದಾರೆ' ಎಂದು ಖರ್ಗೆ ಆರೋಪಿಸಿದ್ದಾರೆ.

ರಾಜಸ್ಥಾನದಲ್ಲಿ ಇಂದು ಬಹಿರಂಗ ಪ್ರಚಾರ ತೆರೆ ಕಾಣಲಿದೆ. ನವೆಂಬರ್‌ 25ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್‌ 3ರಂದು ಮತ ಎಣಿಕೆ ಜರುಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT