ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಲೀಟರ್‌ ಇಂಧನ ದರ ₹ 99.99 ಮೀರುವುದಿಲ್ಲ!: ಮರುಕಳಿಸುತ್ತಾ ‘Y2K’ ಸಮಸ್ಯೆ?

Last Updated 16 ಸೆಪ್ಟೆಂಬರ್ 2018, 12:01 IST
ಅಕ್ಷರ ಗಾತ್ರ

ಕಳೆದ ಕೆಲವು ವಾರಗಳಲ್ಲಿ ಇಂಧನ ದರ ಪ್ರತಿ ಲೀಟರ್‌ಗೆ ₹ 90ರ ಗಡಿ ಸಮೀಪಿಸಿದೆ.ಇನ್ನೇನು ಪೆಟ್ರೋಲ್‌ ಬೆಲೆ ನೂರಕ್ಕೇರಲಿದೆ ಎಂದು ವಾಹನ ಸವಾರರು ಲೆಕ್ಕಾಚಾರ ಹಾಕಿದ್ದರು.ಒಂದು ವೇಳೆ ಬೆಲೆ ನೂರು ತಲುಪಿದರೂ, ಪೆಟ್ರೋಲ್‌ ಪಂಪ್‌ ಮಾಡುವ ಯಂತ್ರಗಳು ಗರಿಷ್ಠ ಎಂದರೆ 99.99 ರೂಪಾಯಿಯನ್ನು ಮಾತ್ರವೇ ತೋರಬಲ್ಲವು. ನೂರರ ನಂತರದ ಬೆಲೆ ಪುನಃ ₹ 1ರಿಂದ ಆರಂಭವಾಗುತ್ತವೆ.

ಸೆಪ್ಟೆಂಬರ್‌ 15ರಂದು ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹ 0.35 ಪೈಸೆ ಹಾಗೂ ಮುಂಬೈನಲ್ಲಿ ₹ 0.34 ಪೈಸೆಯಷ್ಟು ಏರಿಕೆಯಾಗಿದ್ದು, ಎರಡೂ ನಗರಗಳಲ್ಲಿ ಪೆಟ್ರೋಲ್‌ ಬೆಲೆ ಕ್ರಮವಾಗಿ ₹ 81.63 ಮತ್ತು ₹ 89.01ಕ್ಕೆ ತಲುಪಿದ್ದವು.ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾದದ್ದು, ಈ ಬೆಳವಣಿಗೆಗೆ ಕಾರಣ. ಈ ಸಂದರ್ಭದಲ್ಲಿಅತ್ಯಂತ ಉತ್ಕೃಷ್ಟ ಗುಣಮಟ್ಟದ ಆಕ್ಟೇನ್‌ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ನೂರು ಮೀರಿದೆ.

ಇದರ ಬೆಲೆ ಸೆಪ್ಟೆಂಬರ್‌ 08ರ ವೇಳೆಗಾಗಲೇ ₹ 100.33ರಷ್ಟಾಗಿತ್ತು. ಆದರೆ ಸದ್ಯ ಕೇಂದ್ರೀಕೃತ ದರ ಸೂಚಕ ವ್ಯವಸ್ಥೆ ಅಳವಡಿಸಲಾಗಿರುವ ಪೆಟ್ರೋಲ್‌ ಪಂಪ್‌ಗಳಿಗೆ ಇದನ್ನು ಡಿಸ್ಪ್ಲೇ ಮಾಡಲು ಸಾಧ್ಯವಾಗಿಲ್ಲ.ಈ ವೇಳೆ ಪೆಟ್ರೋಲ್‌ ಪಂಪ್‌ನಲ್ಲಿ ₹ 0.33 ಡಿಸ್ಪ್ಲೇ ಆಗಿದೆ. ಈ ಬಗ್ಗೆ ಮಾತನಾಡಿರುವ ಪೆಟ್ರೋಲ್‌ ಬಂಕ್‌ನ ಮಾಲೀಕರು, ‘ಪ್ರತಿ ನಿತ್ಯವೂ ಇಂಧನ ದರ ಬದಲಾಗುವುದರಿಂತ ಬೆಲೆ ಮರುಹೊಂದಿಕೆ ಮಾಡಬೇಕಾಗುತ್ತದೆ. ಆದಾಗ್ಯೂ ₹ 100ರ ನಂತರದ ಮೊತ್ತವನ್ನು ಹೊಂದಿಸಲು ಸಾಧ್ಯವಾಗದು’ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಎಚ್‌ಪಿಸಿಎಲ್‌) ‘ಪವರ್‌ 99’ ಹೆಸರಿನ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಪೆಟ್ರೋಲ್‌ ಅನ್ನು ಮಾರಾಟ ಮಾಡುತ್ತಿದೆ. ಇದರ ಬೆಲೆ ಸಾಮಾನ್ಯ ಪೆಟ್ರೋಲ್‌ಗಿಂತ ಯಾವಾಗಲೂ ₹ 20 ಹೆಚ್ಚಿಗೆ ಇರುತ್ತದೆ. ಆದರೆ ಸದ್ಯ ಪೆಟ್ರೋಲ್‌ ಬಂಕ್‌ಗಳಲ್ಲಿ ಇರುವ ದರ ಸೂಚಕ ಯಂತ್ರಗಳು ಗರಿಷ್ಠ 99.99 ರೂಪಾಯಿಯನ್ನು ಮಾತ್ರವೇ ಪರದೆಯಲ್ಲಿ ಪ್ರದರ್ಶಿಸಬಲ್ಲವು.

ಪೆಟ್ರೋಲ್‌ ಪಂಪ್‌ಗಳು ಕೇಂದ್ರೀಕೃತ ವ್ಯವಸ್ಥೆ ಹೊಂದಿರುವುದರಿಂದ, ಬೆಲೆಗಳೂ ಸ್ವಯಂಚಾಲಿತವಾಗಿ ಬದಲಾಗುತ್ತಿರುತ್ತವೆ. ಹೀಗಾಗಿ ಅಗತ್ಯವಾದ ಹೊಂದಾಣಿಕೆಗಳನ್ನು ಮಾಡಬೇಕಾದ ಸಂದರ್ಭದಲ್ಲಿ ಪಂಪ್‌ ಸೇವೆ ಸ್ಥಗಿತಗೊಳಿಸಬೇಕಾಗುತ್ತದೆ.

ಎಚ್‌ಪಿಸಿಎಲ್‌ನ ಉತ್ಕೃಷ್ಟ ಗುಣಮಟ್ಟದ ಪೆಟ್ರೋಲ್‌‘ಪವರ್‌ 99’ ಹೊಸ ತಲೆಮಾರಿನ ಇಂಧನವೆಂದು ಪರಿಗಣಿಸಲಾಗಿದೆ. ಇದನ್ನು ದೀರ್ಘಕಾಲದವರೆಗೆಎಂಜಿನ್‌ನ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಐಷಾರಾಮಿ ವಾಹನಗಳಿಗೆ ಬಳಕೆ ಮಾಡಲಾಗುತ್ತದೆ. ಸದ್ಯ ಈ ಇಂಧನವುಪುಣೆ, ಮುಂಬೈ, ದೆಹಲಿ, ನೋಯ್ಡಾ, ಜಲಂಧರ್ ಮತ್ತು ಬೆಂಗಳೂರಿನಲ್ಲಿ ಈ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ.

**

**

ಹೊಸ ನೋಟು ಮತ್ತು ಹಳೆ ಎಟಿಎಂ ಸಮಸ್ಯೆ

₹ 500 ಹಾಗೂ ₹ 1000 ಮುಖಬೆಲೆಯ ನೋಟುಗಳನ್ನು 2016ರ ನವೆಂಬರ್‌8ರಂದು ಚಲಾವಣೆಯಿಂದ ಹಿಂಪಡೆಯಲಾಯಿತು. ಬಳಿಕ ಆರ್‌ಬಿಐ ಬಿಡುಗಡೆ ಮಾಡಿದ ₹ 200, ₹ 500 ಹಾಗೂ ₹ 2000 ಮುಖ ಬೆಲೆಯ ಹೊಸ ನೋಟುಗಳನ್ನು ಹಳೆ ಎಟಿಎಂಗಳಿಗೆ ತುಂಬಿಸುವ ಸಂದರ್ಭದಲ್ಲಿ ಸಮಸ್ಯೆಗಳು ಉಂಟಾದವು.

ಹೊಸ ನೋಟುಗಳನ್ನು ಹಳೆ ಎಟಿಎಂಗಳಿಗೆ ತುಂಬಿಸಲು ಅವುಗಳಗಾತ್ರ ಮತ್ತು ವಿನ್ಯಾಸಕ್ಕೆ ಅನುಗುಣವಾಗಿಎಟಿಎಂಗಳನ್ನು ಮರು ಹೊಂದಿಕೆ ಮಾಡಬೇಕಾದ/ಮೇಲ್ದರ್ಜೆಗೆ ಏರಿಸಬೇಕಾದ ಪರಿಸ್ಥಿತಿ ಎದುರಾಯಿತು. ನೋಟು ರದ್ದು ತೀರ್ಮಾನ ಹೊರಬಿದ್ದು 21 ತಿಂಗಳು ಕಳೆದಿದ್ದರೂ ಇನ್ನೂ ಎಲ್ಲ ಎಟಿಎಂಗಳನ್ನು ಮೇಲ್ದರ್ಜೆಗೆ ಏರಿಸಲು ಸಾಧ್ಯವಾಗಿಲ್ಲ.

ದೇಶದ ಅತಿ ದೊಡ್ಡ ಬ್ಯಾಂಕಿಂಗ್‌ ವ್ಯವಸ್ಥೆ ಹೊಂದಿರುವ ಎಸ್‌ಬಿಐ, 18,135 ಎಟಿಎಂಗಳನ್ನು ಮೇಲ್ದರ್ಜೆಗೆ ಏರಿಸಿಲ್ಲ. ದೇಶದಲ್ಲಿ ಎಸ್‌ಬಿಐನ ಒಟ್ಟು 59,521 ಎಟಿಎಂಗಳು ಇದ್ದು, ಈ ಪೈಕಿ 41,386 ಎಟಿಎಂಗಳನ್ನು ಮಾತ್ರವೇ ಮರು ಹೊಂದಿಕೆ ಮಾಡಲಾಗಿದೆ. ಇದಕ್ಕಾಗಿ ಎಸ್‌ಬಿಐ ₹ 22.50 ಕೋಟಿ ಹಣವನ್ನು ವ್ಯಯಿಸಿದೆ.

**

‘Y2K’ ಮಾದರಿ ಸಮಸ್ಯೆ

1999ನೇ ವರ್ಷ ಮುಗಿದು 2000ನೇ ವರ್ಷ ಆರಂಭವಾದಾಗ ಗಣಕೀಕೃತ ವ್ಯವಸ್ಥೆ ಅಳವಡಿಸಲಾಗಿರುವ ಯಂತ್ರಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತ್ತು. ವರ್ಷಕ್ಕೆ ಸಂಬಂಧಿಸಿದಂತೆ 19ನೇ ಶತಮಾನದಿಂದೀಚಿನ ವರ್ಷಗಳೂನಾಲ್ಕು ಡಿಜಿಟ್‌ ಹೊಂದಿವೆಯಾದರೂ, ವರ್ಷದಿಂದ ವರ್ಷಕ್ಕೆ ಕೊನೆಯ ಒಂದು ಸಂಖ್ಯೆಯನ್ನು ಹಾಗೂ ಹತ್ತು ವರ್ಷಕ್ಕೊಮ್ಮೆಕೊನೆಯ ಎರಡು ಸಂಖ್ಯೆಗಳನ್ನು ಮಾತ್ರಬದಲಾವಣೆ ಮಾಡಿಕೊಳ್ಳಲಾಗುತ್ತಿತ್ತು.

ಆದರೆ, 2000 ಇಸವಿ ಆರಂಭವಾದಾಗ ಹೊಸವರ್ಷವನ್ನು ನಮೂದಿಸಲುಎಲ್ಲಾ ನಾಲ್ಕೂ ಡಿಜಿಟ್‌ಗಳನ್ನು ಬದಲಾಯಿಸಬೇಕಾಯಿತು. ಈ ವೇಳೆ ಜಗತ್ತಿನಾದ್ಯಂತ ಇದ್ದ ಕಂಪ್ಯೂಟರ್‌ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾಗಿ ಬಗ್‌ ಸೇರ್ಪಡೆಯಾಗಿದ್ದವು.

ಈ ವೇಳೆ ಇಂಗ್ಲೆಂಡ್‌ ಮೂಲದ ಬ್ರಿಟಿಷ್‌ ಸ್ಟ್ಯಾಂಡರ್ಡ್ಸ್‌ ಸಂಸ್ಥೆ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿತ್ತು.

ಸದ್ಯ ದೇಶದಲ್ಲಿನ ಪೆಟ್ರೋಲ್‌ ಪಂಪ್ ಯಂತ್ರಗಳು 2 ಡಿಜಿಟ್‌ ಅಂಕಿಗಳನ್ನು ಮಾತ್ರವೇ ಎಣಿಸುವ ಸಾಮರ್ಥ್ಯ ಹೊಂದಿದ್ದು,ಒಂದು ವೇಳೆ ದೇಶದಲ್ಲಿ ಪೆಟ್ರೋಲ್‌ ಬೆಲೆ ಮೂರಂಕಿ(₹ 100) ದಾಟಿದರೆY2k(year 2000)ಮಾದರಿಯಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT