ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ’ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಅಥವಾ ಕಲಾಪಕ್ಕೆ ಅಡ್ಡಿಪಡಿಸಿದ ಸಂಸದರನ್ನು ಜನರು ನೆನಪಿಟ್ಟುಕೊಳ್ಳುವುದಿಲ್ಲ. ಸಂಸತ್ತಿನಲ್ಲಿ ಉಪಯುಕ್ತ ಸಲಹೆ ನೀಡಿದವರು, ಅಧಿವೇಶನಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡವರನ್ನು ಜನರು ನೆನಪಿಟ್ಟುಕೊಳ್ಳುತ್ತಾರೆ. ಸಂಸದರು ತಮ್ಮ ಸಂಸತ್ ಕ್ಷೇತ್ರಗಳಲ್ಲಿ ಜನರನ್ನು ವಿಚಾರಿಸಿದರೆ ಈ ಕುರಿತು ಅವರಿಗೇ ತಿಳಿಯುತ್ತದೆ‘ ಎಂದು ಮೋದಿ ಹೇಳಿದರು.