ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯು ಭಾನುವಾರ ಇಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಾತನಾಡುವರು.

ಉತ್ತರಪ್ರದೇಶ ರಾಜ್ಯವು ಒಳಗೊಂಡಂತೆ ಐದು ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಕುರಿತು ಈ ಸಭೆಯು ಪ್ರಮುಖವಾಗಿ ಚರ್ಚಿಸುವ ಸಂಭವವಿದೆ.

ಪಕ್ಷದ ನಿಯಮಗಳ ಅನುಸಾರ, ರಾಷ್ಟ್ರೀಯ ಕಾರ್ಯಕಾರಣಿಯ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕು. ಆದರೆ, ದೇಶದಲ್ಲಿ ಕೋವಿಡ್‌ನಿಂದ ಉದ್ಭವಿಸಿದ್ದ ಪರಿಸ್ಥಿತಿಯಿಂದಾಗಿ ಈಗ ಬಹುತೇಕ ಎರಡು ವರ್ಷಗಳ ನಂತರ ಈ ಸಭೆಯು ನಡೆಯುತ್ತಿದೆ.

ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರು, ಪ್ರಮುಖ ಮುಖಂಡರು, ಕೇಂದ್ರದ ಸಚಿವರು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ವರ್ಚ್ಯುವಲ್ ಸ್ವರೂದದಲ್ಲಿ ಸಭೆಯಲ್ಲಿ ಭಾಗವಹಿಸುವರು. ನಡ್ಡಾ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಪ್ರಧಾನಿ ಅಂತಿಮಗೋಷ್ಠಿಯಲ್ಲಿ ಭಾಷಣ ಮಾಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.