ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೇಕಾಫ್ ಆಗದ ಹೆಲಿಕಾಪ್ಟರ್; ರಸ್ತೆ ಮೂಲಕ ಜೆಮ್‌ಶೆಡ್‌ಪುರಕ್ಕೆ ತೆರಳಿದ ಮೋದಿ

Published : 15 ಸೆಪ್ಟೆಂಬರ್ 2024, 7:14 IST
Last Updated : 15 ಸೆಪ್ಟೆಂಬರ್ 2024, 7:14 IST
ಫಾಲೋ ಮಾಡಿ
Comments

ರಾಂಚಿ(ಜಾರ್ಖಂಡ್): ಪ್ರತಿಕೂಲ ಹವಾಮಾನದ ಹಿನ್ನೆಲೆ ಹೆಲಿಕಾಪ್ಟರ್ ಟೇಕಾಫ್ ಆಗದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಂಚಿ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಜೆಮ್‌ಶೆಡ್‌ಪುರಕ್ಕೆ ತೆರಳಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಿಂದ ಜೆಮ್‌ಶೆಡ್‌ಪುರದ ಗೋಪಾಲ್ ಮೈದಾನ ಸುಮಾರು 126 ಕಿ.ಮೀ ದೂರವಿದೆ. ಗೋಪಾಲ್ ಮೈದಾನದಲ್ಲಿ ಅವರು ಬಿಜೆಪಿಯ 'ಪರಿವರ್ತನ್ ಮಹಾ ರ್‍ಯಾಲಿ'ಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ವರ್ಷದ ಕೊನೆಯಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೋದಿ ಅವರ ಈ ಭೇಟಿ ರಾಜಕೀಯ ಮಹತ್ವ ಹೊಂದಿದೆ.

ಬುಡಕಟ್ಟು ಪ್ರಾಬಲ್ಯವಿರುವ 9 ಕ್ಷೇತ್ರಗಳು ಸೇರಿದಂತೆ 14 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಕೊಲ್ಹಾನ್ ಪ್ರದೇಶದಕ್ಕೆ ಮೋದಿ ಅವರು ಭೇಟಿ ನೀಡಲಿದ್ದಾರೆ. ಇತ್ತೀಚೆಗೆ ಜೆಎಂಎಂ ಪಕ್ಷ ತೊರೆದು ಬಿಜೆಪಿ ಸೇರಿದ್ದ ಮಾಜಿ ಮುಖ್ಯಮಂತ್ರಿ ಚಂಪೈ ಸೂರೇನ್ ಅವರು ಇದೇ ಪ್ರದೇಶದಿಂದ ಬಂದಿರುವುದರಿಂದ, ಮೋದಿ ಅವರ ಈ ಭೇಟಿ ಮತ್ತಷ್ಟು ಪ್ರಾಮುಖ್ಯತೆ ಪಡೆದಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ, ಬುಡಕಟ್ಟು ಪ್ರಾಬಲ್ಯವಿರುವ ಒಂಬತ್ತು ಕ್ಷೇತ್ರಗಳಲ್ಲಿ ಬಿಜೆಪಿಗೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT