ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಾದ್ಯಂತ ₹41ಸಾವಿರ ಕೋಟಿ ಮೊತ್ತದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

Published 26 ಫೆಬ್ರುವರಿ 2024, 9:28 IST
Last Updated 26 ಫೆಬ್ರುವರಿ 2024, 9:28 IST
ಅಕ್ಷರ ಗಾತ್ರ

ನವದೆಹಲಿ: ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ದೇಶದಾದ್ಯಂತ ₹41 ಸಾವಿರ ಕೋಟಿ ಮೊತ್ತದ 2 ಸಾವಿರಕ್ಕೂ ಹೆಚ್ಚು ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಿದರು.

ಕಳೆದ 10 ವರ್ಷದಲ್ಲಿ ಹೊಸ ಭಾರತವನ್ನು ಜನ ನೋಡಿದ್ದಾರೆ. ಭಾರತವು ಈಗ ದೊಡ್ಡ ಕನಸುಗಳನ್ನು ಕಾಣುತ್ತಿದೆ ಮತ್ತು ಅದರ ಕನಸುಗಳನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತಿದೆ ಎಂದರು.

ಸಾರ್ವಜನಿಕರ ಹಣವನ್ನು ಲೂಟಿ ಮಾಡುವುದನ್ನು ತಡೆದು, ಒಂದೊಂದು ರೂಪಾಯಿಯನ್ನೂ ರೈಲ್ವೆ ಅಭಿವೃದ್ಧಿಗೆ ವ್ಯಯಿಸಲಾಗುತ್ತಿದೆ. ಕೆಲವರ ರಾಜಕೀಯದಿಂದಾಗಿ ಭಾರತೀಯ ರೈಲ್ವೆ ಬಲಿಪಶುವಾಗಿತ್ತು. ಆದರೆ ಈಗ ಇದು ಸುಲಭ ಪ್ರಯಾಣದ ಮುಖ್ಯ ಆಧಾರವಾಗಿದೆ, ಇವೆಲ್ಲದರ ಜತೆಗೆ ಇದು ಉದ್ಯೋಗದ ದೊಡ್ಡ ಮೂಲವಾಗಿದೆ ಎಂದು ಪ್ರತಿಪಾದಿಸಿದರು.

ಸ್ಥಳೀಯ ಸಂಸ್ಕೃತಿ ಮತ್ತು ಕುಶಲಕರ್ಮಿಗಳನ್ನು ಉತ್ತೇಜಿಸಲು ಹೊಸ ರೀತಿಯಲ್ಲಿ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಯುವ ಜನರ ಕನಸುಗಳು ನನ್ನ ಸಂಕಲ್ಪವಾಗಿದೆ. ಯುವ ಜನರ ಕನಸುಗಳು, ಕಠಿಣ ಪರಿಶ್ರಮ ಮತ್ತು ನನ್ನ ಸಂಕಲ್ಪ ಎಲ್ಲವೂ ವಿಕಸಿತ ಭಾರತದ ಗ್ಯಾರಂಟಿ ಎಂದರು. 

ವರ್ಚುವಲ್‌ ಕಾರ್ಯಕ್ರಮದಲ್ಲಿ ದೇಶಾದ್ಯಂತ ನೂರಾರು ಸಂಸದರು ಮತ್ತು ಶಾಸಕರು, ವಿವಿಧ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT