ಭುವನೇಶ್ವರ: ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುವ ಒಡಿಶಾ ಸರ್ಕಾರದ ‘ಸುಭದ್ರಾ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು.
ಈ ಯೋಜನೆಯ ಸೌಲಭ್ಯ ಒಡಿಶಾದ ಸುಮಾರು 1 ಕೋಟಿಗೂ ಹೆಚ್ಚು ಮಹಿಳೆಯರಿಗೆ ದೊರಕಲಿದೆ. ಈ ಯೊಜನೆಯಡಿ 21–60 ವರ್ಷ ಮಹಿಳೆಯರು ಐದು ವರ್ಷಗಳಲ್ಲಿ ₹ 50 ಸಾವಿರ ಪಡೆಯಲಿದ್ದಾರೆ. ಅಂದರೆ ಪ್ರತಿ ವರ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಎರಡು ಕಂತುಗಳಲ್ಲಿ ₹10 ಸಾವಿರ ಜಮಾ ಆಗಲಿದೆ.
ಇದೇ ವೇಳೆ ಮೋದಿ ₹2800 ಕೋಟಿಗೂ ಅಧಿಕ ವೆಚ್ಚದ ರೈಲ್ವೆ ಯೋಜನೆಗೆ ಹಾಗೂ ₹1 ಸಾವಿರ ಕೋಟಿಗೂ ಅಧಿಕ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಅಲ್ಲದೆ 14 ರಾಜ್ಯಗಳ 10 ಲಕ್ಷ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿದರು, ಈ ಯೊಜನೆ ಇನ್ನೂ ಹೆಚ್ಚಿನ ಕುಟುಂಬಗಳಿಗೆ ಪ್ರಯೋಜನಕಾರಿಯಾಗುವಂತೆ ಸರ್ವೆ ನಡೆಸಲು ‘ಆವಾಸ್ + 2024’ ಮೊಬೈಲ್ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಿದರು.
#WATCH | Bhubaneswar, Odisha: PM Modi launches ‘SUBHADRA’, the flagship Scheme of the Government of Odisha.
— ANI (@ANI) September 17, 2024
It is expected to cover more than 1 crore women. Under the scheme, all eligible beneficiaries between the age of 21-60 years would receive Rs. 50,000 for 5 years. An… pic.twitter.com/A0taqDQ9Vb
#WATCH | Bhubaneswar, Odisha: PM lays the foundation stone and dedicates to the nation Railway Projects worth more than Rs. 2800 crores in Bhubaneswar and lays the foundation stone of National Highway Projects worth more than Rs. 1000 crores.
— ANI (@ANI) September 17, 2024
Prime Minister released the 1st… pic.twitter.com/y1sGRUCfpH
#WATCH | Bhubaneswar, Odisha: PM Modi hands over the keys of their house to PMAY (Gramin and Urban) beneficiaries. pic.twitter.com/ndI0XCuDUl
— ANI (@ANI) September 17, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.