ಆನ್ಲೈನ್ ಮೂಲಕ ಮೋದಿ ಅವರು ಹಾಗೂ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ‘ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಎಂಯು ಸಮುದಾಯದ ಪರವಾಗಿ ಧನ್ಯವಾದಗಳು’ ಎಂದು ಎಎಂಯು ಕುಲಪತಿ ಪ್ರೊ.ತಾರಿಖ್ ಮನ್ಸೂರ್ ತಿಳಿಸಿದ್ದಾರೆ.