ಪಟ್ನಾ: ಬಿಹಾರಕ್ಕೆ ಬರೋಬ್ಬರಿ 50ನೇ ಬಾರಿ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಈ ಐತಿಹಾಸಿಕ ಸಾಧನೆ ಮಾಡಿದ ಏಕೈಕ ಪ್ರಧಾನಿ ಎನಿಸಿದ್ದಾರೆ.

ಬಿಹಾರ ಪ್ರವಾಸದಲ್ಲಿರುವ ಮೋದಿ, ಪಟ್ನಾದಲ್ಲಿ ₹ 1,200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಯ ಪ್ರಕಾಶ್ ನಾರಾಯಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಗುರುವಾರ ಉದ್ಘಾಟಿಸಿದರು. ಈ ನಿಲ್ದಾಣವು ವಾರ್ಷಿಕ ಒಂದು ಕೋಟಿ ಪ್ರಯಾಣಿಕರ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಪಟ್ನಾ ಹೊರವಲಯದಲ್ಲಿರುವ ಬಿಹ್ತಾ ವಿಮಾನ ನಿಲ್ದಾಣದಲ್ಲಿ ₹ 1,410 ಕೋಟಿ ಮೊತ್ತದ ನೂತನ ನಾಗರಿಕ ಸಂಕೀರ್ಣ ನಿರ್ಮಾಣಕ್ಕೆ ಅದೇ ವೇಳೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅದಕ್ಕೂ ಮೊದಲು ಅವರು, ರಾಜಧಾನಿಯಲ್ಲಿ 6 ಕಿ.ಮೀ ರೋಡ್ ಶೋ ನಡೆಸಿದರು.

ಇದರೊಂದಿಗೆ, ಮೋದಿ ಅವರು ಈ ವರ್ಷ ಮೂರನೇ ಬಾರಿ ಬಿಹಾರಕ್ಕೆ ಭೇಟಿ ನೀಡಿದಂತಾಗಿದೆ. ಇದಕ್ಕೂ ಮೊದಲು ಫೆಬ್ರುವರಿಯಲ್ಲಿ ಭಗಲ್ಪುರಕ್ಕೆ ಭೇಟಿ ನೀಡಿದ್ದ ಅವರು, ಪಹಲ್ಗಾಮ್ ಉಗ್ರರ ದಾಳಿ ನಡೆದ ಎರಡು ದಿನಗಳ ಬಳಿಕ ಏಪ್ರಿಲ್ 24ರಂದು ಮಧುಬನಿಗೆ ಭೇಟಿ ನೀಡಿದ್ದರು. 'ಘೋರ ಭಯೋತ್ಪಾದನಾ ದಾಳಿ ಸಂಘಟಿಸಿದವರನ್ನು ಪತ್ತೆ ಹಚ್ಚಿ, ಊಹಿಸಲೂ ಸಾಧ್ಯವಿಲ್ಲದಂತಹ ಶಿಕ್ಷೆ ನೀಡಲಾಗುವುದು' ಎಂದು ಗುಡುಗಿದ್ದರು.
.Patna Airport |₹1,200 ಕೋಟಿ ವೆಚ್ಚದ ಹೊಸ ಟರ್ಮಿನಲ್ ಉದ್ಘಾಟಿಸಿದ ಪ್ರಧಾನಿ ಮೋದಿ.ಪಶ್ಚಿಮ ಬಂಗಾಳದಲ್ಲಿ ‘ಕ್ರೂರಿ ಸರ್ಕಾರ’: ಪ್ರಧಾನಿ ಮೋದಿ ಟೀಕೆ.
ಮೋದಿ ಭೇಟಿ ಬಗ್ಗೆ ಮಾಹಿತಿ ನೀಡಿರುವ ಬಿಹಾರ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ, 'ಪ್ರಧಾನಿಯಾಗಿ ಮೋದಿ ಅವರು ಬಿಹಾರಕ್ಕೆ ನೀಡಿದ 50ನೇ ಭೇಟಿ ಇದಾಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಅವರೆಷ್ಟು ಕಾಳಜಿ ಹೊಂದಿದ್ದಾರೆ ಎಂಬುದನ್ನು ಇದು ತೋರುತ್ತದೆ' ಎಂದಿದ್ದಾರೆ.

ಬಿಹಾರ ವಿಧಾನಸಭೆಗೆ ಇದೇ ಅಕ್ಟೋಬರ್–ನವೆಂಬರ್ ವೇಳೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ಘೊಷಿಸುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಅದಕ್ಕೆ ಪ್ರತಿಯಾಗಿ, ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಮೇ 7ರಂದು 'ಆಪರೇಷನ್ ಸಿಂಧೂರ' ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.