ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ಗೋಬೆಲ್ಸ್‌ ಸ್ಫೂರ್ತಿ: ಜೈರಾಮ್‌ ರಮೇಶ್‌ ಲೇವಡಿ

Published 29 ಏಪ್ರಿಲ್ 2024, 5:41 IST
Last Updated 29 ಏಪ್ರಿಲ್ 2024, 5:41 IST
ಅಕ್ಷರ ಗಾತ್ರ

ನವದೆಹಲಿ: ನಾಜಿ ಪ್ರಚಾರಕ ಜೋಸೆಫ್ ಗೋಬೆಲ್ಸ್ ಅವರಿಂದ ಸ್ಫೂರ್ತಿ ಪಡೆದು ಕಾಂಗ್ರೆಸ್ ಪ್ರಣಾಳಿಕೆ ‘ನ್ಯಾಯ ಪತ್ರ’ದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಆರೋಪಿಸಿದ್ದಾರೆ.

‘ಎನ್‌ಟಾಯರ್‌ ಪೊಲಿಟಿಕಲ್‌ ಸೈನ್ಸ್‌ನಲ್ಲಿ ಎಂಎ ಮಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೋಬೆಲ್ಸ್‌ ಅವರ ಬಗ್ಗೆ ಓದಿ ಸ್ಪೂರ್ತಿ ಪಡೆದುಕೊಂಡಿರಬೇಕು’ ಎಂದು ಲೇವಡಿ ಮಾಡಿದ್ದಾರೆ.

‘ದೊಡ್ಡ ಸುಳ್ಳೊಂದು ಹೇಳಿ ಅದೇ ಸುಳ್ಳನ್ನು ಮತ್ತೆ ಮತ್ತೆ ಹೇಳಿದರೆ ಜನ ಅದನ್ನು ನಂಬುತ್ತಾರೆ’ ಎಂಬ ಗೋಬೆಲ್ಸ್‌ನ ಮಾತನ್ನು ಇಲ್ಲಿ ಉಲ್ಲೇಖಸಿದ್ದಾರೆ.

‘ಇತ್ತೀಚೆಗೆ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ನಿರ್ಲಜ್ಜವಾಗಿ, ನಾಚಿಕೆಯಿಲ್ಲದೆ ಸುಳ್ಳು ಹೇಳಿದ್ದಾರೆ. ಇದು 'ಅಸತ್ಯಮೇವ ಜಯತೇ' ಪ್ರಧಾನಿಯ ಧ್ಯೇಯವೆಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಅವರು ಮಾತನಾಡುವಾಗಲೆಲ್ಲಾ ಸತ್ಯವನ್ನು ಕೊಲ್ಲುತ್ತಾರೆ’ ಎಂದು ರಮೇಶ್‌ ಕಿಡಿಕಾರಿದ್ದಾರೆ.

ಹಿಟ್ಲರ್ ಆಡಳಿತದಲ್ಲಿ ಗೋಬೆಲ್ಸ್‌ ಪ್ರಚಾರ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT