ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 SRH vs GT | ಪ್ಲೇ ಆಫ್‌ ಖಚಿತಪಡಿಸಿಕೊಳ್ಳುವತ್ತ ‘ಸನ್‌’ ಚಿತ್ತ

ಇಂದು ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯ
Published 15 ಮೇ 2024, 23:30 IST
Last Updated 15 ಮೇ 2024, 23:30 IST
ಅಕ್ಷರ ಗಾತ್ರ

ಹೈದರಾಬಾದ್‌: ಪ್ರಬಲ ಸನ್‌ರೈಸರ್ಸ್ ತಂಡ ಗುರುವಾರ ಇಲ್ಲಿ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ತಂಡವನ್ನು ಎದುರಿಸಲಿದೆ. ಎದುರಾಳಿ ಬೌಲರ್‌ಗಳ ಮೇಲೆ ದಂಡೆತ್ತಿಹೋಗುವ ಬಲಿಷ್ಠ ಬ್ಯಾಟಿಂಗ್ ಸರದಿಯು ತನಗೆ ಗೆಲುವು ಕೊಟ್ಟು, ಪ್ಲೇ ಆಫ್‌ ಸ್ಥಾನ ಖಚಿತಪಡಿಸಬಹುದೆಂಬ ವಿಶ್ವಾಸದಲ್ಲಿ ಸನ್‌ರೈಸರ್ಸ್‌ ತಂಡವಿದೆ.

ಸನ್‌ರೈಸರ್ಸ್ ತಂಡಕ್ಕೆ ಎರಡು ಪಂದ್ಯಗಳು ಆಡಲು ಬಾಕಿಯಿದೆ. ಒಂದು ಗೆದ್ದರೂ ಪ್ಲೇ ಆಫ್‌ ಸ್ಥಾನ ಖಚಿತ. ಆದರೆ ಎರಡೂ ಪಂದ್ಯಗಳನ್ನು ಗೆದ್ದು, ಮೊದಲ ಎರಡರಲ್ಲಿ ಒಂದು ಸ್ಥಾನ ಪಡೆಯುವ ಗುರಿಯಲ್ಲಿ ಪ್ಯಾಟ್‌ ಕಮಿನ್ಸ್‌ ಬಳಗ ಇದೆ.

ತಂಡವು 12 ಪಂದ್ಯಗಳಿಂದ 14 ಪಾಯಿಂಟ್ಸ್‌ ಹೊಂದಿದೆ. ಎರಡೂ ಗೆದ್ದರೆ 18 ಪಾಯಿಂಟ್ಸ್‌ಗೆ ಏರಲಿದ್ದು, ಮೊದಲ ಎರಡರಲ್ಲಿ ಒಂದು ಸ್ಥಾನ ಪಡೆಯಬಹುದು.

ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ತನ್ನ ಕೊನೆಯ ಪಂದ್ಯದಲ್ಲಿ 10 ವಿಕೆಟ್‌ಗಳ ದಾಖಲೆ ಗೆಲುವು ಪಡೆದ ಬಳಿಕ ಸನ್‌ರೈಸರ್ಸ್‌ಗೆ ಒಂದು ವಾರ ಬಿಡುವೂ ದೊರತಿದೆ. ಆದರೆ ಈ ಆವೃತ್ತಿಯಲ್ಲಿ ಕೆಲವು ಭರ್ಜರಿ ಗೆಲುವುಗಳನ್ನು ದಾಖಲಿಸಿರುವ ಸನ್‌ರೈಸರ್ಸ್‌, ಒಂದೆರಡು ಪಂದ್ಯಗಳಲ್ಲಿ ನೀರಸವಾಗಿ ಆಡಿದ್ದೂ ಇದೆ.

ತಂಡ ಟ್ರಾವಿಸ್ ಹೆಡ್‌ ಮತ್ತು ಅಭಿಷೇಕ್‌ ಶರ್ಮಾ ಅವರಿಂದ ಮತ್ತೆ ಸ್ಫೋಟಕ ಆರಂಭ ನಿರೀಕ್ಷಿಸಿದೆ.

ಇನ್ನೊಂದೆಡೆ 13 ಪಂದ್ಯಗಳಿಂದ 11 ಪಾಯಿಂಟ್ಸ್ ಗಳಿಸಿರುವ ಟೈಟನ್ಸ್‌ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ನಿರಾಶಾದಾಯಕ ಅಭಿಯಾನವನ್ನು ಗೆಲುವಿನೊಡನೆ ಅಂತ್ಯಗೊಳಿಸುವ ಯತ್ನದಲ್ಲಿದೆ.

ಹಾರ್ದಿಕ್ ಪಾಂಡ್ಯ ಕಳೆದ ವರ್ಷದ ಕೊನೆಯಲ್ಲಿ ಮುಂಬೈ ಇಂಡಿಯನ್ಸ್‌ಗೆ ಹೋದ ನಂತರ ಟೈಟನ್ಸ್  ತಂಡಕ್ಕೆ ಸಮರ್ಥ ಬದಲಿ ಆಟಗಾರ ದೊರೆಯದೇ ಹೋಗಿದ್ದು ದೊಡ್ಡ ಕೊರತೆ. ಅನುಭವಿ ವೇಗಿ ಶಮಿ ಅವರ ಅನುಪಸ್ಥಿತಿಯಂತೂ ತಂಡವನ್ನು ಬಲವಾಗಿ ಕಾಡಿದೆ.

ಬ್ಯಾಟಿಂಗ್‌ ವಿಭಾಗದ ಯಶಸ್ಸು, ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಆರಂಭ ಅವಲಂಬಿಸಿದೆ. ಸುದರ್ಶನ್ ಈ ಬಾರಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಡೇವಿಡ್‌ ಮಿಲ್ಲರ್ ಅವರಿಂದ ಸ್ಪೋಟಕ ಇನಿಂಗ್ಸ್‌ ಬಂದಿಲ್ಲ. ಅವರಿಂದ ತಂಡ ಕೊಡುಗೆ ನಿರೀಕ್ಷಿಸುತ್ತಿದೆ.

ಪಂದ್ಯ ಆರಂಭ: ರಾತ್ರಿ 7.30.

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್‌ ನೆಟ್‌ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್

ಅಭಿಷೇಕ್‌ ಶರ್ಮಾ

ಅಭಿಷೇಕ್‌ ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT