ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಧಾನಿ ಕಚೇರಿ ಹಿಡಿತದಲ್ಲಿ ಎಲ್ಲ ಸಚಿವಾಲಯಗಳ ಅಧಿಕಾರ’

Last Updated 11 ಆಗಸ್ಟ್ 2018, 18:36 IST
ಅಕ್ಷರ ಗಾತ್ರ

ಮುಂಬೈ: ಎಲ್ಲ ಸಚಿವಾಲಯಗಳ ಅಧಿಕಾರವನ್ನೂ ಪ್ರಧಾನಿ ಕಚೇರಿ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ ಎಂದು ಕೇಂದ್ರ ಮಾಜಿ ಸಚಿವರಾದ ಯಶವಂತ ಸಿನ್ಹಾ, ಅರುಣ್‌ ಶೌರಿ ಹಾಗೂ ಬಿಜೆಪಿ ಭಿನ್ನಮತೀಯ ಮುಖಂಡ ಶತ್ರುಘ್ನ ಸಿನ್ಹಾ ಆರೋಪಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫ್ರಾನ್ಸ್‌ ಜತೆಗಿನ ರಫೇಲ್‌ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ₹35,000 ಕೋಟಿಯ ಹಗರಣ ನಡೆದಿದೆ. ಇದು ₹64 ಕೋಟಿ ಮೊತ್ತದ ಬೋಪೋರ್ಸ್‌ ಹಗರಣಕ್ಕಿಂತಲೂ ಅತಿ ದೊಡ್ಡ ಹಗರಣ ಎಂದು ಅವರು ಕಿಡಿಕಾರಿದ್ದಾರೆ.

‘ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ’ ಕಾರ್ಯಕ್ರಮದಲ್ಲಿ ಈ ಮೂವರು ಹಿರಿಯ ನಾಯಕರು ಪಾಲ್ಗೊಂಡು ಮಾತನಾಡಿದರು.

‘ಎನ್‌ಡಿಎ ಸರ್ಕಾರದಲ್ಲಿ ಎಲ್ಲ ಸಚಿವಾಲಯಗಳ ಮಹತ್ವದ ನಿರ್ಧಾರಗಳು ‘ಒಬ್ಬ ವ್ಯಕ್ತಿಯ ಕೈಯಲ್ಲಿ ನಿಯಂತ್ರಿಸಲ್ಪಡುತ್ತಿವೆ’. ಕೇಂದ್ರ ಸಚಿವರು ಏನೂ ಮಾಡುತ್ತಿಲ್ಲ' ಎಂದು ಎಂದು ಯಶವಂತ ಸಿನ್ಹಾ ಆಪಾದಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜತೆಗಿನ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡು ಸರ್ಕಾರದಿಂದ ಹೊರ ಬರುವ ತೀರ್ಮಾನ ಕೇಂದ್ರ ಗೃಹ ಸಚಿವರ ಗಮನಕ್ಕೂ ಇರಲಿಲ್ಲ ಎಂದು ರಾಜನಾಥ್‌ ಹೆಸರು ಉಲ್ಲೇಖಿಸದೇ ಅವರು ಟೀಕಿಸಿದರು.

ಪ್ರಧಾನಿ ಮೋದಿ ₹ 500 ಮತ್ತು ₹1,000 ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸಲು ತೆಗೆದುಕೊಂಡ ತೀರ್ಮಾನ ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿಗೂ ತಿಳಿದಿರಲಿಲ್ಲ. ನೋಟು ರದ್ದತಿಯ ಆಘಾತದಿಂದ ದೇಶ ಹೊರ ಬರುವ ಮೊದಲೇ ಪ್ರಧಾನಿ, ಸರಕರು ಸೇವೆ ತೆರಿಗೆ (ಜಿಎಸ್‌ಟಿ) ಹೇರಿದರು. ದೇಶದ ಜನತೆಯ ದುಃಖವನ್ನು ಇಮ್ಮಡಿಗೊಳಿಸಿದರು ಎಂದು ವಾಗ್ದಾಳಿ ಮಾಡಿದರು.

ಅರುಣ್‌ ಶೌರಿ ಮಾತನಾಡಿ, ದೇಶದಲ್ಲಿ ಸಂವಿಧಾನ ಅಪಾಯದಲ್ಲಿರುವುದು ನಿಸ್ಸಂಶಯ. ದೇಶದಲ್ಲಿ ಇದುವರೆಗೆ 72 ಗುಂಪು ಹತ್ಯೆ ನಡೆದಿವೆ. ಸೊರಾಬುದ್ದೀನ್‌ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ 54 ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನುಡಿದಿದ್ದಾರೆ. ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹರಿಹಾಯ್ದರು.

‘ನೀವು ಬಿಜೆಪಿಯವರಾಗಿ ಬಿಜೆಪಿಯನ್ನೇಕೆ ಅಷ್ಟೊಂದು ಕಟುವಾಗಿ ಟೀಕೆ ಮಾಡುತ್ತೀರಿ ಎಂದು ಕೆಲವರು ಕೇಳುತ್ತಾರೆ. ಆದರೆ, ನಾನು ಬಿಜೆಪಿಯವನು ಎನ್ನುವುದಕ್ಕಿಂತ ಮೊದಲು ಈ ದೇಶದ ಪ್ರಜೆ. ಪಕ್ಷಕ್ಕೆ ಅದರ ನಾಯಕತ್ವದ ಬಗ್ಗೆ ಪ್ರಾಮಾಣಿಕವಾದ ಜನಾಭಿಪ್ರಾಯ ಕೊಡುವುದು ನನ್ನ ಧರ್ಮ’ ಎಂದು ಸಂಸದ ಶತೃಘ್ನ ಸಿನ್ಹಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT