ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಫೆಲೋಷಿಪ್‌: ಫೆಬ್ರುವರಿಯಿಂದ ನೋಂದಣಿ

Last Updated 9 ಸೆಪ್ಟೆಂಬರ್ 2018, 19:40 IST
ಅಕ್ಷರ ಗಾತ್ರ

ನವದೆಹಲಿ: ಬಿ.ಟೆಕ್‌ನಲ್ಲಿ ಕನಿಷ್ಠ 8.0ರಷ್ಟು ಗುಣಾಂಕ (ಸಿಜಿಪಿಎ) ಪಡೆದ ಪದವೀಧರರು ಪ್ರಧಾನಮಂತ್ರಿ ಸಂಶೋಧನಾ ಫೆಲೋಷಿಪ್‌ಗೆ (ಪಿಎಂಆರ್‌ಎಫ್‌) ಅರ್ಜಿ ಸಲ್ಲಿಸಬಹುದು.

ದೇಶದ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಬಿ.ಟೆಕ್‌ ಪದವಿ ಪಡೆದವರು ಈಫೆಲೋಷಿಪ್‌ಗೆ ಅರ್ಹರು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 2019ರ ಫೆಬ್ರುವರಿಯಿಂದ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭಿಸಲಿದೆ.

ಬಿ.ಟೆಕ್‌ ಅಂತಿಮ ವರ್ಷದ ವಿದ್ಯಾರ್ಥಿಗಳು, ಎಂಜಿನಿಯರಿಂಗ್‌ನಲ್ಲಿ ಪದವಿ ಯೋಗ್ಯತಾ ಪರೀಕ್ಷೆ (ಗೇಟ್‌) ತೇರ್ಗಡೆಯಾದ ಎಂ.ಟೆಕ್‌ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಫೆಲೋಷಿಪ್‌ಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಭಾರತೀಯ ತಾಂತ್ರಿಕ ಸಂಸ್ಥೆಗಳು (ಐಐಟಿ) ಹಾಗೂ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ (ಐಐಎಸ್‌ಇಆರ್‌) ಸಂಶೋಧನೆಗೆ (ಪಿಎಚ್‌ಡಿ) ನೋಂದಣಿ ಮಾಡಿಸಿಕೊಳ್ಳಬೇಕು.

2018–2019ನೇ ಸಾಲಿನಿಂದ ಆರಂಭವಾಗುವ ಫೆಲೋಷಿಪ್‌ ಯೋಜನೆಯು 7 ವರ್ಷಗಳ ಅವಧಿಗೆ ₹1,650 ಕೋಟಿ ಮೀಸಲಿಟ್ಟಿದೆ. ಪಿಎಚ್‌.ಡಿ ಕೈಗೊಳ್ಳುವ ವಿದ್ಯಾರ್ಥಿಗೆ ಮೊದಲ ಎರಡು ವರ್ಷ ಪ್ರತಿ ತಿಂಗಳು ₹70,000, ಮೂರನೇ ವರ್ಷದಲ್ಲಿ ಪ್ರತಿ ತಿಂಗಳು ₹75,000, ನಾಲ್ಕು ಮತ್ತು ಐದನೇ ವರ್ಷದ ಪ್ರತಿ ತಿಂಗಳು ₹80,000 ನೀಡಲಾಗುವುದು. ವಿದೇಶಗಳಲ್ಲಿ ಸಂಶೋಧನಾ ಪ‍್ರಬಂಧ ಮಂಡಿಸಲು ಹಾಗೂ ಉಪನ್ಯಾಸ ಕಾರ್ಯಕ್ರಮಕ್ಕೆ ಹೋಗಲು ಹೆಚ್ಚುವರಿಯಾಗಿ ₹ 2 ಲಕ್ಷ ಅನುದಾನ ನೀಡಲಾಗುವುದು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT