ಘಟನೆ ನಡೆದಿಲ್ಲ: ಸಂತ್ರಸ್ತೆ ತಂದೆ
ಶುಕ್ರವಾರ ರಾತ್ರಿ 9.40ರ ವೇಳೆಗೆ ನನ್ನ ಮಗಳು ನನಗೆ ಕರೆ ಮಾಡಿದ್ದಳು. ಆಕೆ ಅಪಘಾತವಾಗಿ ವಾಹನದಿಂದ ಬಿದ್ದ ಪರಿಣಾಮ ಗಾಯಗಳಾಗಿದೆ ಎಂದು ತಿಳಿಸಿದ್ದಳು. ನಂತರ ಆಕೆ ಆಸ್ಪತ್ರೆ ದಾಖಲಾಗಿದ್ದಾಳೆಂದು ತಿಳಿದುಬಂದಿತು. ಪೊಲೀಸರು ಹೇಳುವಂತೆ ಯಾವ ಘಟನೆಯೂ ನಡೆದಿಲ್ಲ ಎಂದು ಮಹಿಳೆಯ ತಂದೆ ಹೇಳಿದ್ದಾರೆ. ಅಲ್ಲದೇ, ಪೊಲೀಸರೇ ಆಕೆಯಿಂದ ಈ ರೀತಿಯ ದೂರು ದಾಖಲಿಸುವಂತೆ ಮಾಡಿದ್ದಾರೆ ಎಂದೂ ಆರೋಪಿಸಿದ್ದಾರೆ.