ತಿರುಪ್ಪುರ: ತಂದೆ ಹಾಗೂ ಮಗನ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದ ವಿಶೇಷ ಸಬ್ ಇನ್ಸ್ಟೆಕ್ಟರ್ ಹತ್ಯೆಯಾಗಿದ್ದಾರೆ.

ತಮಿಳುನಾಡಿನ ಗುಡಿಮಂಗಲಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಎಂ. ಷಣ್ಮುಗವೇಲು (57) ಮೃತ ಪೊಲೀಸ್ ಅಧಿಕಾರಿ.

ಇವರು ತಿರುಪ್ಪುರ ಜಿಲ್ಲೆಯ ಗುಡಿಮಂಗಲಮ್ ಠಾಣೆಯಲ್ಲಿ ವಿಶೇಷ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ. 5ರಂದು ಷಣ್ಮುಗವೇಲು ಮತ್ತು ಸಶಸ್ತ್ರ ಪೊಲೀಸ್ ದಳದ ಕಾನ್ಸ್ಟೆಬಲ್ ಅಳಗುರಾಜ ಅವರು ಮಂಗಳವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಮದ್ಯ ಸೇವಿಸಿದ್ದ ಇಬ್ಬರು ವ್ಯಕ್ತಿಗಳ ನಡುವೆ ಜಗಳ ನಡೆಯುತ್ತಿತ್ತು.

ತಂದೆ ಹಾಗೂ ಮಗನ ಈ ಜಗಳ ಬಿಡಿಸಲು ಷಣ್ಮುಗವೇಲು ಮತ್ತು ಅಳಗುರಾಜ ಮುಂದಾದರು. ಈ ಸಂದರ್ಭದಲ್ಲಿ ಜಗಳ ಆಡುತ್ತಿದ್ದವರಲ್ಲಿ ವ್ಯಕ್ತಿಯೊಬ್ಬ ಕುಡುಗೋಲಿನಿಂದ ಇವರ ಮೇಲೆ ಹಲ್ಲೆ ನಡೆಸಿದ್ದಾನೆ. ಷಣ್ಮುಗವೇಲು ಮೃತಪಟ್ಟಿದ್ದಾರೆ. ಕಾನ್ಸ್ಟೆಬಲ್ ದಾಳಿಯಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.