ಪುರಿ: ‘ಹೀರಾ ಪಂಚಮಿ’ ಮುಗಿದ ಮಾರನೇ ದಿನವಾದ ಬುಧವಾರ ಪುರಿ ಜಗನ್ನಾಥ ದೇವರ ‘ಬಹುದಾ ಯಾತ್ರೆ’ಗೆ (ಮುಖ್ಯಮಂದಿರ ಪುನರಾಗಮನ ರಥೋತ್ಸವ) ಜಗನ್ನಾಥ ದೇಗುಲ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆ ಆರಂಭಿಸಿದವು.

ಜಗನ್ನಾಥ ರಥಯಾತ್ರೆ ನಡೆದ ಒಂಬತ್ತು ದಿನಗಳ ನಂತರ ಮುಖ್ಯ ಮಂದಿರಕ್ಕೆ ಜಗನ್ನಾಥ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತರಲಾಗುತ್ತದೆ. ಸದ್ಯ ಗುಂಡೀಚಾ ದೇಗುಲದಲ್ಲಿ ಜಗನ್ನಾಥ ಮೂರ್ತಿ ಸೇರಿ ಮೂರು ದೇವರುಗಳಿವೆ. ಸಾವಿರಾರು ಭಕ್ತರು ಬಲಭದ್ರ, ಸುಭದ್ರಾ ದೇವಿ ಮತ್ತು ಪುರಿ ಜಗನ್ನಾಥ ದೇವರುಗಳ ದರ್ಶನ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 5ರಂದು ‘ಬಹುದಾ ಯಾತ್ರೆ’ ಜರುಗಲಿದ್ದು, ಜಗನ್ನಾಥ ರಥಗಳು ದಕ್ಷಿಣಾಭಿಮುಖವಾಗಿ ಸಂಚರಿಸಲಿವೆ. ಬಲಭದ್ರ ದೇವರ ತಲಧ್ವಜ ರಥ, ಸುಭದ್ರಾ ದೇವಿಯ ದರ್ಪದಲನ್ ರಥ, ಜಗನ್ನಾಥ ದೇವರ ನಂದಿಘೋಷ್ ರಥಗಳನ್ನು ಆರಾಧ್ಯ ದೈವಗಳ ಜನ್ಮಸ್ಥಳವೆಂದೇ ಕರೆಯುವ ಗುಡುಚಿ ದೇಗುಲದಿಂದ ಎಳೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಬುಧವಾರದಿಂದ ಮೂರು ದಿನಗಳ ಕಾಲ ಸಾಂಪ್ರದಾಯಿಕ ರಾಸಲೀಲಾ (ಮನರಂಜನಾ ಕಾರ್ಯಕ್ರಮ) ಆಚರಣೆ ನಡೆಸಲಾಗುತ್ತದೆ. ಕೃಷ್ಣನ ಮಹಿಳಾ ಭಕ್ತರು (ಗೋಪಿಕೆಯರು) ರಾಸಲೀಲಾದಲ್ಲಿ ಭಾಗಿಯಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.