ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್ ಉದ್ಯಮಿ ಪೃಥ್ವಿ ರಾಜ್‌ ಸಿಂಗ್ ಒಬೆರಾಯ್ ನಿಧನ

Published 14 ನವೆಂಬರ್ 2023, 6:40 IST
Last Updated 14 ನವೆಂಬರ್ 2023, 6:40 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿ ಹಾಗೂ ಒಬೆರಾಯ್‌ ಸಮೂಹದ ಗೌರವಾಧ್ಯಕ್ಷ ಪೃಥ್ವಿ ರಾಜ್‌ ಸಿಂಗ್‌ (ಪಿ.ಆರ್‌.ಎಸ್) ಒಬೆರಾಯ್‌ ಅವರು ಇಂದು (ಮಂಗಳವಾರ) ನಿಧನರಾದರು ಎಂದು ಒಬೆರಾಯ್ ಗ್ರೂಪ್‌ನ ವಕ್ತಾರರು ತಿಳಿಸಿದ್ದಾರೆ.

ಅವರಿಗೆ 94 ವರ್ಷ ವಯಸ್ಸಾಗಿತ್ತು.

ʼನಮ್ಮ ಪ್ರೀತಿಯ ನಾಯಕ ಪಿ.ಆರ್‌.ಎಸ್ ಒಬೆರಾಯ್‌ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಈ ವಿಚಾರ ತಿಳಿಸಲು ಅಪಾರ ದುಃಖವಾಗುತ್ತಿದೆ. ಒಬೆರಾಯ್ ಅವರ ಖ್ಯಾತಿಯು ಆತಿಥ್ಯ ಉದ್ಯಮದಲ್ಲಿ ಗಡಿಗಳನ್ನು ಮೀರಿದೆ. ಅವರ ನಿಧನವು ಒಬೆರಾಯ್‌ ಸಮೂಹಕ್ಕೆ, ದೇಶ ಮತ್ತು ವಿದೇಶದ ಹೋಟೆಲ್‌ ಉದ್ಯಮಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆʼ ಎಂದು ಕಂಪನಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಂತ್ಯಕ್ರಿಯೆಯು ಇಂದು ಸಂಜೆ 4ಕ್ಕೆ ಕಪಶೇರಾದ ಒಬೆರಾಯ್ ಫಾರ್ಮ್‌ನ ಭಗವಂತಿ ಒಬೆರಾಯ್ ಚಾರಿಟೇಬಲ್ ಟ್ರಸ್ಟ್‌ನಲ್ಲಿ ನಡೆಯಲಿದೆ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT