ಖೇಡ್ಕರ್ ಪರ ವಕಾಲತ್ತು ನಡೆಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ನೇಮಕಾತಿ ವಜಾ ಮಾಡಿರುವ ಬಗ್ಗೆ ಆಯೋಗವು ತಮ್ಮ ಕಕ್ಷಿದಾರರಿಗೆ ಮಾಹಿತಿ ನೀಡಿಲ್ಲ ಹಾಗೂ ಮಾಧ್ಯಮ ಪ್ರಕಟಣೆಯಿಂದಷ್ಟೆ ಈ ವಿಚಾರ ತಮ್ಮ ಗಮನಕ್ಕೆ ಬಂದಿದ್ದಾಗಿ ಆರೋಪಿಸಿದರು. ಆಗ, ಆಯೋಗದ ಪರ ವಕೀಲ ನರೇಶ್ ಕೌಶಿಕ್ ಮಾತನಾಡಿ, ನೇಮಕಾತಿ ರದ್ದತಿ ಆದೇಶವನ್ನು ಎರಡು ದಿನಗಳ ಒಳಗಾಗಿ ಖೇಡ್ಕರ್ ಅವರ ಇಮೇಲ್ ಹಾಗೂ ವಿಳಾಸಕ್ಕೆ ಕಳುಹಿಸಲಾಗುವುದು ಎಂದರು.