ಫಿರೋಜ್ಪುರ: ಪಹಲ್ಗಾಮ್ ಭಯೋತ್ಪಾದಕರ ದಾಳಿಯ ನಂತರ ನಡೆದ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನವು ಭಾರತದೆಡೆಗೆ ಹಾರಿಸಿದ್ದ ಕ್ಷಿಪಣಿಯ ಅವಶೇಷಗಳು ಮನೆಯ ಮೇಲೆ ಬಿದ್ದಿದ್ದರಿಂದ ಗಾಯಗೊಂಡಿದ್ದ ಲಕ್ವಿಂದರ್ ಸಿಂಗ್ (57) ಅವರು ಲೂಧಿಯಾನದಲ್ಲಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ಭಾರತ–ಪಾಕಿಸ್ತಾನದ ಮಧ್ಯೆ ಮೇ 9ರಂದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದಾಗ ಕ್ಷಿಪಣಿ ಅವಶೇಷಗಳು ಮನೆಯ ಮೇಲೆ ಬಿದ್ದು ಪಂಜಾಬ್ನ ಫಿರೋಜ್ಪುರದ ನಿವಾಸಿ ಲಕ್ವಿಂದರ್ ಸಿಂಗ್, ಅವರ ಪತ್ನಿ ಸುಖ್ವಿಂದರ್ ಕೌರ್ (50) ಮತ್ತು ಅವರ ಪುತ್ರ ಗಾಯಗೊಂಡಿದ್ದರು.

ಸುಖ್ವಿಂದರ್ ಕೌರ್ ಮೇ 13ರಂದು ಮೃತಪಟ್ಟಿದ್ದರು. ದಂಪತಿಯ ಪುತ್ರ ಗುಣಮುಖರಾಗಿದ್ದಾರೆ.

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಭಾರತದ ಸೇನಾ ನೆಲೆಗಳ ಮೇಲೆ ಶೆಲ್ ಮತ್ತು ಕ್ಷಿಪಣಿ ದಾಳಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.