ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಿಂದ ಬಂದಿದ್ದ ಕಂಟೇನರ್‌ನಲ್ಲಿ 60 ದಿನ ಆಹಾರ ಇಲ್ಲದೇ ಬದುಕುಳಿದ ರಾಕೂನ್!

ಶಿಪ್ಪಿಂಗ್ ಕಂಟೇನರ್ ಒಂದರಲ್ಲಿ ಸಿಲುಕಿದ್ದ ರಾಕೂನ್ (ಒಂದು ಬಗೆಯ ಪ್ರಾಣಿ) ರಕ್ಷಣೆ
Published 1 ಜನವರಿ 2024, 14:36 IST
Last Updated 1 ಜನವರಿ 2024, 14:36 IST
ಅಕ್ಷರ ಗಾತ್ರ

ಮುಂಬೈ: ಶಿಪ್ಪಿಂಗ್ ಕಂಟೇನರ್ ಒಂದರಲ್ಲಿ ಸಿಲುಕಿದ್ದ ರಾಕೂನ್ (ಒಂದು ಬಗೆಯ ಪ್ರಾಣಿ) ಬರೋಬ್ಬರಿ 60 ದಿನಗಳ ಕಾಲ ಆಹಾರ, ನೀರು ಇಲ್ಲದೇ ಬದುಕುಳಿದಿರುವ ಘಟನೆ ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯಲ್ಲಿ ನಡೆದಿದೆ.

ಅಮೆರಿಕದಿಂದ ಹಡಗಿನಲ್ಲಿ ವಾಡಾ ತಾಲ್ಲೂಕಿನ ಜವಾಹರಲಾಲ್ ನೆಹರು ಬಂದರಿಗೆ ಬಂದಿದ್ದ ಶಿಪ್ಪಿಂಗ್ ಕಂಟೇನರ್ ಒಂದರ ಸರಕಿನ ಹಿಂದೆ ಈ ರಾಕೂನ್ ನಾಯಿ ಸಿಲುಕಿತ್ತು. ಅದು ತೀರಾ ನಿತ್ರಾಣ ಸ್ಥಿತಿಯಲ್ಲಿತ್ತು ಎಂದು ಬಂದರಿನ ಅಧಿಕಾರಿಗಳು ತಿಳಿಸಿದ್ದಾರೆ.

ಬಂದರು ಅಧಿಕಾರಿಗಳು ಕೂಡಲೇ Resqink Association for Wildlife Welfare (RAWW) ಅನ್ನು ಸಂಪರ್ಕಿಸಿ ಪ್ರಾಣಿಯನ್ನು ರಕ್ಷಿಸಿದ್ದಾರೆ.

ಅಪರೂಪದ ಪ್ರಾಣಿಯಾದ ರಾಕೂನ್, ಆಹಾರ, ನೀರು ಇಲ್ಲದೇ ನಿರ್ಜಲೀಕರಣದಿಂದ ತತ್ತರಿಸಿತ್ತು. ತನಿಖೆ ಮಾಡಿದಾಗ ರಾಕೂನ್ ನವೆಂಬರ್ 5ರಂದು ಅಮೆರಿಕದಿಂದ ಹೊರಟಿದ್ದ ಹಡಗಿನ ಕಂಟೇನರ್‌ನಲ್ಲಿ ಸಿಲುಕಿತ್ತು ಎಂಬುದು ಗೊತ್ತಾಗಿದೆ. ಅಂದರೆ 60 ದಿನ ಅದಕ್ಕೆ ತಿನ್ನಲು, ಕುಡಿಯಲು ಏನೂ ಸಿಕ್ಕಿಲ್ಲ. ಆದರೂ ಬದುಕಿದೆ ಎಂದು RAWW ಸಂಸ್ಥಾಪಕ ಪವನ್ ಶರ್ಮಾ ತಿಳಿಸಿದ್ದಾರೆ.

ನರಿ ಅಥವಾ ನಾಯಿಯನ್ನು ಹೋಲುವ ರಾಕೂನ್ ಪ್ರಾಣಿಗಳು ಮುಖ್ಯವಾಗಿ ಅಮೆರಿಕ, ಕೆನಡಾ ಸೇರಿದಂತೆ ಉತ್ತರ ಅಮೆರಿಕದಲ್ಲಿ ಕಂಡು ಬರುತ್ತವೆ. ಇವು ಮಧ್ಯಮ ಗಾತ್ರದ ಸಸ್ತನಿಗಳು ಎಂದು ಶರ್ಮಾ ತಿಳಿಸಿದ್ದಾರೆ.

ಸದ್ಯ ರಾಕೂನ್ ಚೇತರಿಸಿಕೊಳ್ಳುತ್ತಿದ್ದು ಅದಕ್ಕೆ ಅಗತ್ಯ ಆಹಾರ, ನೀರು ನೀಡಿದ್ದೇವೆ. ಅದನ್ನು ವಾಪಾಸ್ ಅಮೆರಿಕಕ್ಕೆ ಕಳುಹಿಸಲು ಪ್ರಯತ್ನಿಸಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT