ಕಣ್ಣೂರು(ಕೇರಳ): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಎಪ್ಸ್ಟೈನ್ ಫೈಲ್ಸ್’ ಬಳಸಿ ಪ್ರಧಾನಿ ಮೋದಿ ಅವರಿಗೆ ಬೆದರಿಕೆ ಹಾಕಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.

ಕೇರಳದ ಪೆರವೂರಿನಲ್ಲಿ ರೈತರ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ‘ರೈತರು ಭಾರತದ ಅಡಿಪಾಯ ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ’ ಎಂದರು.

ಪ್ರಧಾನಿ ವಿರುದ್ಧ ಎರಡು ಅಸ್ತ್ರ:

‘ಪ್ರಧಾನಿ ಖೆಡ್ಡಕ್ಕೆ ಬಿದ್ದ ಎರಡು ವಿಚಾರಗಳನ್ನು ನಾನು ಪ್ರಸ್ತಾಪಿಸುತ್ತೇನೆ ಎನ್ನುವ ಕಾರಣಕ್ಕಾಗಿಯೇ ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ’ ಎಂದು ರಾಹುಲ್ ಗಾಂಧಿ ಆರೋಪಿಸಿದರು.

‘35 ಲಕ್ಷ ಪುಟಗಳ ಎಪ್ಸ್ಟೈನ್ ಫೈಲ್ಸ್ ನಾನು ಪ್ರಸ್ತಾಪಿಸಲಿದ್ದ ಮೊದಲ ವಿಚಾರ. ಇದರಲ್ಲಿ ಭಾರತದ ಪ್ರಧಾನಿ ಬಗ್ಗೆಯೂ ಮಾಹಿತಿ ಇದೆ. ಅಮೆರಿಕ ಸರ್ಕಾರ ಇದನ್ನು ಗೋಪ್ಯವಾಗಿ ಇಟ್ಟಿದೆ. ಪ್ರಧಾನಿ ಗುರಿಯಾಗಿರಿಸಿಕೊಂಡೇ ಸಚಿವ ಹರ್ದೀಪ್ ಪುರಿ, ಉದ್ಯಮಿ ಅನಿಲ್ ಅಂಬಾನಿ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಾಗಿದೆ’ ಎಂದರು.

‘ಅಮೆರಿಕದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ದಾಖಲಾಗಿರುವ ಪ್ರಕರಣ ನನ್ನ ಎರಡನೇ ಅಸ್ತ್ರ. ಅದಾನಿಯೇ ಬಿಜೆಪಿ ಮತ್ತು ಪ್ರಧಾನಿಗೆ ಆರ್ಥಿಕ ಮೂಲ’ ಎಂದು ರಾಹುಲ್ ಆರೋಪಿಸಿದರು.

‘ನಾವು ಹೇಳಿದ್ದನ್ನು ಮಾಡದಿದ್ದರೆ, ಎಲ್ಲವನ್ನೂ ಬಯಲು ಮಾಡುತ್ತೇವೆ ಎಂದು ಅಮೆರಿಕದವರು ಪ್ರಧಾನಿಯನ್ನು ಬೆದರಿಸಿದ್ದರು. ತನ್ನ ಹಾಗೂ ಬಿಜೆಪಿಯ ಆರ್ಥಿಕ ಮೂಲವನ್ನು ರಕ್ಷಿಸಿಕೊಳ್ಳಲು ಮೋದಿ ನಮ್ಮ ರೈತರನ್ನೇ ಬಲಿ ಕೊಟ್ಟಿದ್ದಾರೆ. ಭಾರತದ ರೈತರನ್ನು ತ್ಯಾಗ ಮಾಡಲು ಕಾಂಗ್ರೆಸ್ ಬಿಡುವುದಿಲ್ಲ’ ಎಂದು ರಾಹುಲ್ ಹೇಳಿದರು.

ನಮ್ಮ ರೈತರಿಗೆ ಅನ್ಯಾಯ

‘ಅಮೆರಿಕದ ರೈತರ ಭೂಮಿ ತಂತ್ರಜ್ಞಾನಕ್ಕೆ ಹೋಲಿಸಿದರೆ ಭಾರತದ ರೈತರು ಸಣ್ಣ ಪ್ರಮಾಣದ ಕೃಷಿಕರು. ನಮ್ಮ ಕೃಷಿ ಮಾರುಕಟ್ಟೆಯನ್ನು ಅಲ್ಲಿನ ರೈತರಿಗೆ ತೆರೆದರೆ ಅದು ಅಪರಾಧ ಎಸಗಿದಂತೆ’ ಎಂದು ರಾಹುಲ್ ಟೀಕಿಸಿದ್ದಾರೆ.

‘ಅಮೆರಿಕದ ಸೋಯಾಬೀನ್ ಜೋಳ ಮತ್ತು ಹಣ್ಣುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಈ ಹಿಂದಿನ ಯಾವುದೇ ಪ್ರಧಾನಿ ಅವಕಾಶ ನೀಡಿರಲಿಲ್ಲ. ನಾವು ಅತ್ಯಂತ ಎಚ್ಚರಿಕೆಯಿಂದ ಕೃಷಿಯ ಅಡಿಪಾಯವನ್ನು ಭದ್ರಪಡಿಸಿದ್ದೆವು. ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿ ಇದಕ್ಕಾಗಿಯೇ ನಡೆದವು. ಆದರೆ ಈ ಸರ್ಕಾರ ಕೃಷಿಯ ತಳಹದಿಯನ್ನೇ ಸರ್ವನಾಶ ಮಾಡುತ್ತಿದೆ’ ಎಂದರು.

‘ಅಮೆರಿಕದ ಕೃಷಿಕರಿಗೆ ಇಲ್ಲಿನ ಮಾರುಕಟ್ಟೆ ತೆರೆಯಲು ಸರ್ಕಾರ ಅಧಿಕಾರಿಗಳು ಸಿದ್ಧವಿರಲಿಲ್ಲ. ಕೃಷಿ ವಿಚಾರದಲ್ಲಿ ಒಮ್ಮತ ಮೂಡದೆ ಭಾರತ–ಅಮೆರಿಕ ಒಪ್ಪಂದ ನಾಲ್ಕು ತಿಂಗಳಿನಿಂದಲೂ ಸ್ಥಗಿತಗೊಂಡಿತ್ತು. ಆದರೆ ಅಮೆರಿಕ ಅಧ್ಯಕ್ಷರು ಭಾರತದ ಪ್ರಧಾನಿಯನ್ನು ಹೆದರಿಸಿ ಸಹಿ ಹಾಕಿಸಿಕೊಂಡಿದ್ದಾರೆ’ ಎಂದು ರಾಹುಲ್ ಆರೋಪಿಸಿದರು.

ರೈತ ಕುಟುಂಬ ಭೇಟಿ:

ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದ ಕೇರಳದ ಪ್ರಗತಿಪರ ರೈತ ಅಂಬಟ್ಟು ಅವರ ಪತ್ನಿ ಲೈಸಮ್ಮ ಅವರನ್ನು ರಾಹುಲ್ ಗಾಂಧಿ ಅವರು ಇದೇ ವೇಳೆ ಭೇಟಿ ಮಾಡಿ ಸಾಂತ್ವನ ಹೇಳಿದರು. ಹಲವು ಕೃಷಿಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ ರಾಹುಲ್ ಗಾಂಧಿ ಕೇರಳದಲ್ಲಿ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಸನ್ನಿ ಜೋಸೆಫ್ ಸಂಸದರಾದ ಕೆ.ಸಿ.ವೇಣುಗೋಪಾಲ್ ಕೆ.ಸುಧಾಕರನ್ ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.