ಕರ್ನಾಟಕ, ತೆಲಂಗಾಣದಲ್ಲಿ ಶೀಘ್ರ ಜಾರಿ
‘ದಲಿತ ಯುವಕರೇ ಧ್ವನಿ ಎತ್ತಿ ಸಂಘಟಿತರಾಗಿ ರೋಹಿತ್ ವೇಮುಲ ಕಾಯ್ದೆ ಜಾರಿಗೆ ಒತ್ತಾಯಿಸಿ’ ಎಂದು ಕರೆ ನೀಡಿದ ರಾಹುಲ್ ಗಾಂಧಿ ಅವರು ‘ ಕರ್ನಾಟಕ, ತೆಲಂಗಾಣದ ಕಾಂಗ್ರೆಸ್ ಸರ್ಕಾರಗಳು ಶೀಘ್ರವೇ ಕಾಯ್ದೆಯನ್ನು ಜಾರಿಗೆ ತರಲಿವೆ’ ಎಂದು ಹೇಳಿದರು. ‘ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವು ಅಪರಾಧ ಎಂದು ಪರಿಗಣಿತವಾದರೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬಹುದು. ಯಾವುದೇ ವಿದ್ಯಾರ್ಥಿಯನ್ನು ಜಾತಿ ಆಧರಿಸಿ ನಿಂದಿಸುವುದು ಕೊನೆಗೊಳ್ಳುತ್ತದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.