ಮತದಾರರ ಪಟ್ಟಿಯಲ್ಲಿ ಅನರ್ಹರ ಸೇರ್ಪಡೆ ಅಥವಾ ಅರ್ಹರನ್ನು ಹೊರಗಿಟ್ಟ ಬಗ್ಗೆ ಸಹಿ ಮಾಡಿದ ಘೋಷಣೆಯೊಂದಿಗೆ ಹೆಸರುಗಳನ್ನು ರಾಹುಲ್ ಗಾಂಧಿ ಸಲ್ಲಿಸಲಿ. ಆಗ ನಾವು ಕಾನೂನು ಕ್ರಮ ಕೈಗೊಳ್ಳಬಹುದು. 2024ರ ವಿಧಾನಸಭಾ ಚುನಾವಣೆಗೆ ಮೊದಲು ಪ್ರಕಟಿಸಿದ ಮತದಾರರ ಪಟ್ಟಿಗಳ ವಿರುದ್ಧ ಕಾಂಗ್ರೆಸ್ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. 2024ರ ಆಗಸ್ಟ್‌ನಲ್ಲಿ ಮತದಾರರ ಕರಡು ಪಟ್ಟಿ ಮತ್ತು ಸೆಪ್ಟೆಂಬರ್‌ನಲ್ಲಿ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಜೊತೆ ಹಂಚಿಕೊಳ್ಳಲಾಗಿತ್ತು ಆದರೆ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲ