ಮುಂಬೈ: ವಾಣಿಜ್ಯ ನಗರಿ ಮುಂಬೈನ ಧಾರಾವಿ ಲೆದರ್ ಹಬ್ಗೆ ಇಂದು (ಗುರುವಾರ) ಭೇಟಿ ನೀಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಲೆದರ್ ಉದ್ಯಮದ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಲೆದರ್ ಹಬ್ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಧಾರಾವಿ ಲೆದರ್ ಹಬ್ಗೆ ರಾಹುಲ್ ಭೇಟಿ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಧಾರಾವಿಯಲ್ಲಿ ಚರ್ಮದ ಉದ್ಯಮದ ಕಾರ್ಮಿಕರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವ ರಾಹುಲ್, ಸಮಸ್ಯೆಗಳನ್ನು ಅರಿತುಕೊಂಡಿದ್ದಾರೆ. ಲೆದರ್ ಉದ್ಯಮಿಗಳೊಂದಿಗೂ ಮಾತುಕತೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಶ್ವದ ಅತಿ ದೊಡ್ಡ ಲೆದರ್ ಹಬ್ಗಳಲ್ಲಿ ಧಾರಾವಿ ಒಂದಾಗಿದೆ. ಇಲ್ಲಿ 20,000ಕ್ಕೂ ಹೆಚ್ಚು ಲೆದರ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಇಂದು ಮುಂಬೈಯಲ್ಲೇ ತಂಗಲಿರುವ ರಾಹುಲ್ ಗಾಂಧಿ ನಾಳೆ (ಶುಕ್ರವಾರ) ಬೆಳಿಗ್ಗೆ ಅಹಮದಾಬಾದ್ಗೆ ಪ್ರಯಾಣ ಬೆಳೆಸಲಿದ್ದಾರೆ.
.ಸಾವರ್ಕರ್ ಕುರಿತು ಹೇಳಿಕೆ | ವಿಚಾರಣೆಗೆ ಗೈರಾದ ರಾಹುಲ್ ಗಾಂಧಿ: ₹200 ದಂಡ.ದಲಿತರ ಹತ್ತಿಕ್ಕುತ್ತಿರುವ ವ್ಯವಸ್ಥೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.