ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರಿಸ್ಥಿತಿ ಕುರಿತು ರಾಹುಲ್‌ ಬಳಸುವ ಭಾಷೆ ಟೂಲ್‌ಕಿಟ್‌ನ ಭಾಗ: ಬಿಜೆಪಿ

ರಾಹುಲ್‌ಗಾಂಧಿ ಆರೋಪ * ಇಂಥ ಹೇಳಿಕೆಯೂ ಟೂಲ್‌ಕಿಟ್‌ನ ಭಾಗ–ಬಿಜೆಪಿ
Last Updated 28 ಮೇ 2021, 12:10 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಸೋಂಕು, ಪರಿಸ್ಥಿತಿ ಕುರಿತು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಬಳಸುವ ಭಾಷೆ, ಭಯ ಮೂಡಿಸುವ ಶೈಲಿಯೇಆ ಪಕ್ಷ ಟೂಲ್‌ಕಿಟ್‌ ರೂಪಿಸಿದೆ ಎಂಬುದನ್ನು ನಿರೂಪಿಸುತ್ತದೆ ಎಂದು ಬಿಜೆಪಿ ಟೀಕಿಸಿದೆ.

ಪಕ್ಷದ ಹಿರಿಯ ಮುಖಂಡರೂ ಆಗಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್ ಅವರು, ಆರೋಗ್ಯ ಇಲಾಖೆ ಕೈಗೊಂಡಿರುವ ಸಿದ್ಧತೆ ಕುರಿತಂತೆ ರಾಹುಲ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿದರು. ಆರೋಗ್ಯ ಇಲಾಖೆಯು ಈ ವರ್ಷದ ಡಿಸೆಂಬರ್‌ ಅಂತ್ಯದ ವೆಳೆಗೆ 216 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮತ್ತು 108 ಕೋಟಿ ಜನರಿಗೆ ಲಸಿಕೆ ನೀಡುವ ಕಾರ್ಯಸೂಚಿ ಹೊಂದಿದೆ ಎಂದು ತಿಳಿಸಿದರು.

ಕೋವಿಡ್ ಸೋಂಕು ತಡೆಗೆ ಪ್ರಧಾನಿ ಕ್ರಮಕೈಗೊಂಡಿರುವ ಹಿಂದೆಯೇ ರಾಹುಲ್‌ ಗಾಂಧಿ ಅವರ ವಿರುದ್ಧ ’ನೌಟಂಕಿ‘ ಪದ ಬಳಕೆ ಮಾಡುತ್ತಾರೆ. ಇದು, ಟೂಲ್‌ಕಿಟ್‌ ಭಾಗವೇ ಆಗಿದೆ ಎಂದು ಜಾವಡೇಕರ್‌ ಆರೋಪಿಸಿದರು.

ಇದು, ಸ್ಪಷ್ಟ. ಅದಕ್ಕಾಗಿ ಸಾಕ್ಷ್ಯದ ಅಗತ್ಯವಿಲ್ಲ. ಟೂಲ್‌ ಕಿಟ್ ಅನ್ನು ಕಾಂಗ್ರೆಸ್‌ ಪಕ್ಷವೇ ರೂಪಿಸಿದೆ. ಜನರಲ್ಲಿ ಭಯ ಮೂಡಿಸಲು ಪಕ್ಷ ಬಳಸುತ್ತಿರುವ ಭಾಷೆಯೇ ಇದಕ್ಕೆ ನಿದರ್ಶನ ಎಂದು ಪ್ರತಿಪಾದಿಸಿದರು.

ಕೋವಿಡ್‌ 2ನೇ ಅಲೆಗೆ ಪ್ರಧಾನಿಯೇ ನೇರ ಹೊಣೆ ಎಂದಿದ್ದ ರಾಹುಲ್‌

ದೇಶದಲ್ಲಿ ಕೋವಿಡ್‌ ಸೋಂಕು ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಹೊಣೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ದೇಶದಲ್ಲಿ ಲಸಿಕೆ ಲಭ್ಯತೆ ಇದೇ ರೀತಿಯಲ್ಲಿ ಮುಂದುವರಿದರೆ ಇನ್ನಷ್ಟು ಅಲೆಗಳು ಬರಬಹುದು ಎಂದು ಎಚ್ಚರಿಸಿದರು. ಸಂಪೂರ್ಣ ಜನಸಂಖ್ಯೆಗೆ ಲಸಿಕೆಯನ್ನು ನೀಡಲು ಕಾರ್ಯತಂತ್ರ ರೂಪಿಸಬೇಕು. ಭಾರತ ಲಸಿಕೆಯ ರಾಜಧಾನಿ. ಎಲ್ಲರಿಗೂ ಲಸಿಕೆ ನೀಡುವುದು ಸಾಧ್ಯವಿದೆ. ಆದರೆ, ಈವರೆಗೆ ಶೇ 3ರಷ್ಟು ಜನರಿಗೆ ಮಾತ್ರವೇ ಲಸಿಕೆ ದೊರೆತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಕೇವಲ ಕಾರ್ಯಕ್ರಮ ಪ್ರವರ್ತಕರಾಗಿದ್ದಾರೆ. ಅವರು ಈಗ ನಾಯಕರಾಗಿ ಕಾರ್ಯನಿರ್ವಹಿಸಬೇಕಾದ ಕಾಲ ಬಂದಿದೆ. ನಾವು ಎಲ್ಲರಿಗೂ ಲಸಿಕೆ ನೀಡಬಲ್ಲೆವು ಎಂದು ತೋರಿಸಬೇಕಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT