ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಸೌಲಭ್ಯಗಳಿಗೆ ಹಣ ವ್ಯಯ: ರೈಲ್ವೆ ಇಲಾಖೆ ಸಮರ್ಥನೆ

Published 11 ಜೂನ್ 2023, 16:25 IST
Last Updated 11 ಜೂನ್ 2023, 16:25 IST
ಅಕ್ಷರ ಗಾತ್ರ

ನವದೆಹಲಿ: ರೈಲು ಪ್ರಯಾಣಿಕರಿಗೆ ಅಗತ್ಯ ಸೇವೆ ಒದಗಿಸಲು ಪಿಂಗಾಣಿ ವಸ್ತುಗಳು, ಪೀಠೋಪಕರಣಗಳ, ಪಾದವನ್ನು ನೀವುವ ಯಂತ್ರಗಳ ಮೇಲೆ ಹಣ ವ್ಯಯಿಸುತ್ತಿರುವ ಕ್ರಮವನ್ನು ರೈಲ್ವೆ ಇಲಾಖೆಯು ಬಲವಾಗಿ ಸಮರ್ಥಿಸಿಕೊಂಡಿದೆ.

ಸುರಕ್ಷತಾ ನಿಧಿ ಬಳಕೆ ಕುರಿತಂತೆ ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿಯೇ ಇವುಗಳಿಗೆ ಹಣ ವ್ಯಯಿಸಲಾಗುತ್ತಿದೆ. ವಿವಿಧ ರೈಲ್ವೆ ವಲಯಗಳು ಕೂಡಾ ನಾಗರಿಕರಿಗೆ ಪ್ರಯಾಣದ ಅವಧಿಯಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಕ್ರಮವಹಿಸಿವೆ ಎಂದು ಹೇಳಿದೆ.

ಒಡಿಶಾದ ಬಾಲೇಶ್ವರದಲ್ಲಿ ನಡೆದ ರೈಲು ಅಪಘಾತದ ಬಳಿಕ ರೈಲ್ವೆ ಇಲಾಖೆಯು ಸುರಕ್ಷತಾ ಕ್ರಮಗಳನ್ನು ಕಡೆಗಣಿಸಿದೆ ಎಂದು ವಿರೋಧಪಕ್ಷಗಳು ದಾಳಿ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಇಲಾಖೆಯು ಈ ಸಮರ್ಥನೆ ನೀಡಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಅವರು, ಮಹಾಲೇಖಪಾಲರ 2021ರ ವರದಿಯ ಅಂಶಗಳನ್ನು ಟ್ವೀಟ್ ಮಾಡಿದ್ದು, ಪಿಂಗಾಣಿ ವಸ್ತುಗಳು, ಲ್ಯಾಪ್‌ಟಾಪ್‌, ಪೀಠೋಪಕರಣ ಖರೀದಿಗೆ ಹಣ ವ್ಯಯಿಸಿ ದುರ್ಬಳಕೆ ಮಾಡಲಾಗಿದೆ‘ ಎಂದಿದ್ದರು.

ರೈಲ್ವೆ ಸುರಕ್ಷತೆಗಾಗಿ ಇರುವ ಹಣವನ್ನು ಹೀಗೇ ವ್ಯಯಿಸಲಾಗಿದೆ. ಮೋದಿ ನೇತೃತ್ವದ ಸರ್ಕಾರ ರಾಷ್ಟ್ರೀಯ ರೈಲು ಸುರಕ್ಷಾ ಕೋಶ್‌ (ಆರ್‌ಆರ್‌ಎಸ್‌ಎಸ್‌) ನಿಧಿಯನ್ನು ವಿವಿಧ ವಸ್ತುಗಳ ಖರೀದಿಗೆ ಬಳಕೆ ಮಾಡಿದೆ ಎಂದು ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ರೈಲ್ವೆ ಅಧಿಕಾರಿಯೊಬ್ಬರು, ಸುರಕ್ಷತಾ ಕ್ರಮಗಳ ಜೊತೆಗೆ ಕೆಲಸ ವಾತಾವರಣ ಉತ್ತಮಪಡಿಸಲು, ತರಬೇತಿ ಕಾರ್ಯಗಳಿಗೂ ಹಣ ನಿಗದಿಯಾಗಿರುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT