ನವದೆಹಲಿ: ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಮಹಿಳಾ ಸಿಬ್ಬಂದಿಗೆ ಚಿಲ್ಲಿ ಸ್ಪ್ರೇ ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಶುಕ್ರವಾರ ತಿಳಿಸಿದೆ.

ಮಾರಕವಲ್ಲದ ಆದರೆ ಪರಿಣಾಮಕಾರಿಯಾದ ಈ ಸಾಧನ(ಚಿಲ್ಲಿ ಸ್ಪ್ರೇ) ಮಹಿಳಾ ಆರ್ಪಿಎಫ್ ಸಿಬ್ಬಂದಿಗೆ ಸವಾಲಿನ ಸಂದರ್ಭಗಳನ್ನು ತ್ವರಿತವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಒಂಟಿಯಾಗಿ ಅಥವಾ ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರನ್ನು ರಕ್ಷಿಸುವಾಗ ಅವರ ಸುರಕ್ಷಿತ ರೈಲು ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಚಿಲ್ಲಿ ಸ್ಪ್ರೇ ನೀಡುವುದರಿಂದ ಮಹಿಳಾ ಆರ್ಪಿಎಫ್ ಸಿಬ್ಬಂದಿಗೆ ಹೆಚ್ಚುವರಿ ಭದ್ರತೆ ದೊರೆಯುತ್ತದೆ. ಇದು ಬೆದರಿಕೆಗಳನ್ನು ತಡೆಯಲು, ಕಿರುಕುಳದ ಘಟನೆಗಳಿಗೆ ಪ್ರತಿಕ್ರಿಯಿಸಲು ಮತ್ತು ತುರ್ತು ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

'ಮಹಿಳೆಯರ ಸಬಲೀಕರಣ ಮತ್ತು ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ಖಚಿತಪಡಿಸಿಕೊಳ್ಳುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಈ ಉಪಕ್ರಮ ಮಾದರಿ. ಮಹಿಳಾ ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಭಾರತೀಯ ರೈಲ್ವೆ ನಿರಂತರವಾಗಿ ಹಲವಾರು ಕ್ರಮಗಳನ್ನು ಪರಿಚಯಿಸಿದೆ' ಎಂದು ಆರ್ಪಿಎಫ್ ಮಹಾನಿರ್ದೇಶಕ (ಡಿಜಿ) ಮನೋಜ್ ಯಾದವ್ ಹೇಳಿದ್ದಾರೆ.

ನಮ್ಮ ಮಹಿಳಾ ಆರ್ಪಿಎಫ್ ಸಿಬ್ಬಂದಿ ಶಕ್ತಿ, ಕಾಳಜಿ ಹಾಗೂ ಗಟ್ಟಿತನದ ಸಂಕೇತಗಳಾಗಿ ನಿಂತಿದ್ದಾರೆ. ಅವರಿಗೆ ಚಿಲ್ಲಿ ಸ್ಪ್ರೇ ನೀಡುವ ಮೂಲಕ ನಾವು ಅವರ ಆತ್ಮವಿಶ್ವಾಸ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೇವೆ ಜೊತೆಗೆ ಪ್ರಯಾಣಿಕರ ಸುರಕ್ಷತೆ ವಿಶೇಷವಾಗಿ ಮಹಿಳೆಯರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಯಾದವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.