ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣದವರೆಗೂ ಒಂದೇ ಹೊತ್ತು ಊಟ: ರಾಜಸ್ಥಾನ ಸಚಿವ

Published 22 ಜನವರಿ 2024, 14:40 IST
Last Updated 22 ಜನವರಿ 2024, 14:40 IST
ಅಕ್ಷರ ಗಾತ್ರ

ಕೋಟ(ರಾಜಸ್ಥಾನ): ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಬೆನ್ನಲ್ಲೇ ಕೃಷ್ಣ ಮಂದಿರದ ಕೂಗು ಶುರುವಾಗಿದೆ. ಕೃಷ್ಣನ ಜನ್ಮ ಸ್ಥಳದಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡುವವರೆಗೂ ದಿನಕ್ಕೆ ಒಂದು ಭೋಜನ ಮಾತ್ರ ಮಾಡುತ್ತೇನೆ ಎಂದು ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಹೇಳಿದ್ದಾರೆ.

‘ಕೃಷ್ಣನ ಜನ್ಮಸ್ಥಳದಲ್ಲಿ ಭವ್ಯ ಮಂದಿರ ನಿರ್ಮಾಣವಾಗುವವರೆಗೆ ನಾನು ಇಂದಿನಿಂದ ದಿನಕ್ಕೆ ಒಮ್ಮೆ ಮಾತ್ರ ಆಹಾರ ಸೇವಿಸುತ್ತೇನೆ’ಎಂದು ರಾಮಗಂಜ್‌ನ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.

1992ರಲ್ಲಿ ರಾಮ ಜನ್ಮ ಭೂಮಿ ಹೋರಾಟದ ಸಂದರ್ಭ ತಮ್ಮ ಸಹವರ್ತಿಗಳ ಅಕ್ರಮ ಬಂಧನ ಮತ್ತು ಸುಳ್ಳು ಹತ್ಯೆ ಪ್ರಕರಣ ದಾಖಲು ಖಂಡಿಸಿ ನೂರಾರು ಕರಸೇವಕರು ಪ್ರತಿಭಟನೆ ನಡೆಸಿದ್ದನ್ನು ದಿಲಾವರ್ ಮೆಲುಕು ಹಾಕಿದರು.

6 ಬಾರಿ ಶಾಸಕ ಮತ್ತು 3 ಬಾರಿ ಸಚಿವರಾಗಿರುವ ದಿಲಾವರ್, ರಾಮಮಂದಿರ ನಿರ್ಮಾಣ ಆಗುವವರೆಗೂ ಹಾರಗಳನ್ನು ಸ್ವೀಕರಿಸುವುದಿಲ್ಲ ಎಂದು 1990ರಲ್ಲಿ ಹೇಳಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ಕಾಯ್ದೆ ಅಡಿಯ ಸ್ಥಾನಮಾನ ಹಿಂಪಡೆಯುವವರೆಗೂ ಹಾಸಿಗೆ ಮೇಲೆ ಮಲಗುವುದಿಲ್ಲ ಎಂದೂ ಅವರು ಫೆಬ್ರುವರಿ 1990ರಲ್ಲಿ ಪ್ರತಿಜ್ಞೆ ಮಾಡಿದ್ದರು. ಅಂದಿನಿಂದ ಅವರು ಚಾಪೆ ಮೇಲೇ ಮಲಗುತ್ತಿದ್ದರು ೆಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT