ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Voting | ರಾಜಸ್ಥಾನ ಚುನಾವಣೆ: ಸಂಜೆ 5ರವರೆಗೆ ಶೇ 68.24 ರಷ್ಟು ಮತದಾನ

Published 25 ನವೆಂಬರ್ 2023, 14:28 IST
Last Updated 25 ನವೆಂಬರ್ 2023, 14:28 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದಲ್ಲಿ ವಿಧಾನಸಭೆಗೆ ನಡೆದ ಮತದಾನದಲ್ಲಿ ಸಂಜೆ 5ರವರೆಗೆ ಶೇ 68.24 ರಷ್ಟು ಮತದಾನವಾಗಿದೆ ಎಂದು ಚುನಾವಣೆ ಅಧಿಕಾರಿಗಳು ಹೇಳಿದ್ದಾರೆ. 

ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನವಾಗಿದ್ದು. ಕೊನೆಯ ಒಂದು ಗಂಟೆಯ ಮತದಾನದ ವಿವರ ಬರಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2018ರಲ್ಲಿ ನಡೆದ ಚುನಾವಣೆಯಲ್ಲಿ ಶೇ 74.72ರಷ್ಟು ಮತದಾನ ಆಗಿತ್ತು.

ಅಲ್ಲಲ್ಲಿ ಸಣ್ಣ ಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. 

ಈ ಸಲ 1862 ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು 5,29,31,152 ಮತದಾರರಿದ್ದು ಈ ಪೈಕಿ 22,61,008 ಮಂದಿ ಹೊಸ ಮತದಾರರು ಇದ್ದಾರೆ. ಕನಿಷ್ಠ 3 ಲಕ್ಷ ಮಂದಿ ಅಂಚೆ ಮತಪತ್ರದ ಮೂಲಕ ಈಗಾಗಲೇ ಮತಹಾಕಿದ್ದಾರೆ. 

ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಗುರ್ಮೀತ್‌ ಸಿಂಗ್‌ ಅವರ ನಿಧನದ ಕಾರಣ  ಶ್ರೀಗಂಗಾನಗರದ ಕರಣಾಪುರ ಕ್ಷೇತ್ರದ ಮತದಾನವನ್ನು ರದ್ದುಪಡಿಸಲಾಗಿದೆ.

ರಾಜಸ್ಥಾನದಲ್ಲಿ ವಿಧಾನಸಭೆಯ 199 ಸ್ಥಾನಗಳಿಗೆ ಮತದಾನ ನಡೆದಿದೆ. ಡಿಸೆಂಬರ್ 3ರಂದು ಫಲಿತಾಂಶ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT