ಜೈಪುರ: ಜೈಪುರ - ಚಕ್ಸು ಹೆದ್ದಾರಿಯಲ್ಲಿ ವ್ಯಾನ್- ಕಂಟೇನರ್ ಲಾರಿ ನಡುವೆ ಶನಿವಾರ ಸಂಭವಿಸಿದ ಅಪಘಾತದಲ್ಲಿ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆ(ರೀಟ್) ಬರೆಯಲು ಹೋಗುತ್ತಿದ್ದ ಆರು ಅಭ್ಯರ್ಥಿಗಳು ಸಾವನ್ನಪ್ಪಿದ್ದು,ಇತರೆ ಐವರು ಗಾಯಗೊಂಡಿದ್ದಾರೆ.

ಈ ಆರು ಮಂದಿ ಅಭ್ಯರ್ಥಿಗಳು ರೀಟ್ ಪರೀಕ್ಷೆ ಬರೆಯುಲು ಬಾರಾನ್‌ನಿಂದ ಸೀಕರ್‌ಗೆ ವ್ಯಾನ್‌ನಲ್ಲಿ ತೆರಳುತ್ತಿದ್ದರು. ವ್ಯಾನ್ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಫಾತ ಸಂಭವಿಸಿದೆ ಎಂದು ಠಾಣಾಧಿಕಾರಿ ಹೀರಾ ಲಾಲ್ ಸೈನಿ ತಿಳಿಸಿದ್ದಾರೆ.

ಮೃತರನ್ನು ವಿಷ್ಣು ನಗರ್, ತೇಜ್‌ರಾಜ್ ಮೇಘ್ವಾಲ್, ಸತ್ಯನಾರಾಯಣ್, ವೇದಪ್ರಕಾಶ್ ಮೀನಾ, ಸುರೇಶ್ ಬೈರ್ವಾ ಮತ್ತು ದಿಲೀಪ್ ಮೆಹ್ತಾ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಬಾರಾನ್ ಜಿಲ್ಲೆಯ ನಿವಾಸಿಗಳಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡಿರುವವರನ್ನು ನರೇಂದ್ರ, ಅನಿಲ್ ಬೈರ್ವಾ, ಭಗವಾನ್ ನಗರ್, ಹೇಮರಾಜ್ ಬೈರ್ವಾ ಮತ್ತು ಜೋರಾವರ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಸೈನಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಘಟನೆ ಕುರಿತು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂದವರಿಗೆ ತಲಾ ₹ 2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರವನ್ನು ನೀಡುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.