ನವದೆಹಲಿ:‘ಭಾರತೀಯ ಮೌಲ್ಯಗಳು ಎಲ್ಲ ಧರ್ಮಗಳನ್ನು ಸಮಾನ ಎಂದು ಪರಿಗಣಿಸುತ್ತವೆ. ಹೀಗಾಗಿ ನಮ್ಮ ದೇಶ ಜಾತ್ಯತೀತವಾಗಿದೆ. ನಮ್ಮದು ಪಾಕಿಸ್ತಾನದಂತಹ ಧರ್ಮಾಧಾರಿತ ಪ್ರಜಾಪ್ರಭುತ್ವವಲ್ಲ’ ಎಂಧು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಎನ್ಸಿಸಿಯ ಗಣರಾಜ್ಯೋತ್ಸವ ಶಿಬಿರದಲ್ಲಿ ಮಾತನಾಡಿದ ಅವರು, ‘ಧರ್ಮಗಳ ಮಧ್ಯೆ ತಾರತಮ್ಯ ಮಾಡುವುದಿಲ್ಲ ಎಂದು ನಾವು (ಭಾರತ) ಹೇಳಿದ್ದೇವೆ. ನಮ್ಮ ನೆರೆ ರಾಷ್ಟ್ರವು ಅವರದ್ದು ಧರ್ಮಾಧಾರಿತ ದೇಶ ಎಂದು ಘೋಷಿಸಿಕೊಂಡಿದೆ. ನಾವು ಹಾಗೆ ಮಾಡಿಲ್ಲ’ ಎಂದು ಹೇಳಿದರು.

‘ಅಮೆರಿಕವೂ ಧರ್ಮಾಧಾರಿತ ರಾಷ್ಟ್ರ. ಭಾರತವು ಅಲ್ಲ. ಯಾಕೆಂದರೆ ನಮ್ಮ ಸಂತರು ಮತ್ತು ಸ್ವಾಮೀಜಿಗಳು, ದೇಶದ ಗಡಿಯೊಳಗೆ ಇರುವವರು ಮಾತ್ರವಲ್ಲ ಇಡೀ ವಿಶ್ವವನ್ನೇ ಒಂದು ಕುಟುಂಬ ಎಂದು ಭಾವಿಸಿದ್ದರು. ನಮ್ಮ ಹಿರಿಯರು ‘ವಸುಧೈವ ಕುಟುಂಬಕಂ’ ಎಂದು ಕರೆದರು. ಆ ಸಂದೇಶ ಜಗತ್ತಿಗೆ ಸಾರಿದ್ದೇ ಭಾರತೀಯರು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.