ಪುರಿ: ಪುರಿ ಜಗನ್ನಾಥ ದೇಗುಲದ ರತ್ನಭಂಡಾರದ ದುರಸ್ತಿ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ಪೂರ್ಣಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ದೇಗುಲದ ಆಡಳಿತ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಪಾಢಿ ಮತ್ತು ಎಎಸ್ಐ ಸೂಪರಿಂಟೆಂಡೆಂಟ್ ಪುರಾತತ್ವ ಶಾಸ್ತ್ರಜ್ಞ ಡಿ.ಬಿ.ಗರ್ನಾಯಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದರು.

95 ದಿನ, ಸುಮಾರು 80 ಜನರು ದುರಸ್ತಿ ಕಾರ್ಯ ನಡೆಸಿದರು ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಅನುಮೋದನೆ ಬಳಿಕ ರತ್ನಭಂಡಾರದ ಬೆಲೆಬಾಳುವ ವಸ್ತುಗಳನ್ನು ಪಟ್ಟಿ ಮಾಡುವ ಕಾರ್ಯ ಆರಂಭವಾಗಲಿದೆ ಎಂದರು.

ಜಗನ್ನಾಥ ದೇಗುಲದ ಖಜಾನೆ ‘ರತ್ನ ಭಂಡಾರ’ವನ್ನು 46 ವರ್ಷಗಳ ನಂತರ ಕಳೆದ ವರ್ಷ ಜೂನ್ನಲ್ಲಿ ತೆರೆದು ದುರಸ್ತಿ ಕಾರ್ಯ ಆರಂಭಿಸಲಾಗಿತ್ತು. ಅಲ್ಲಿದ್ದ ಆಭರಣಗಳು ಮತ್ತು ಅಮೂಲ್ಯ ವಸ್ತುಗಳನ್ನು ತಾತ್ಕಾಲಿಕವಾಗಿ ದೇಗುಲದ ಒಳಗಿನ ಸ್ಟ್ರಾಂಗ್ ರೂಮ್ನಲ್ಲಿ ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.