ಪಟ್ನಾ: ವೈದ್ಯೆಯೊಬ್ಬರು ಐದು ಬಾರಿ ಕೋವಿಡ್ ಲಸಿಕೆ ಪಡೆದಿರುವುದಾಗಿ ದಾಖಲೆಗಳಲ್ಲಿ ಉಲ್ಲೇಖವಾಗಿದ್ದು, ಈ ಕುರಿತು ಬಿಹಾರ ಸರ್ಕಾರ ತನಿಖೆಗೆ ಆದೇಶಿಸಿದೆ.

ಪಟ್ನಾ ಮೂಲದ ಸಿವಿಲ್ ಸರ್ಜನ್ ಡಾ. ವಿಭಾ ಕುಮಾರಿ ಸಿಂಗ್ ಐದು ಬಾರಿ ಲಸಿಕೆ ಪಡೆದಿರುವುದಾಗಿ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಇದನ್ನು ನಿರಾಕರಿಸಿರುವ ಅವರು, ನಿಯಮಗಳಿಗೆ ಅನುಸಾರವಾಗಿ ಮೂರು ಡೋಸ್ ಲಸಿಕೆ ಪಡೆದಿರುವುದಾಗಿ ಹೇಳಿದ್ದಾರೆ.

ತಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಪಡೆದುಕೊಂಡು ಬೇರೆ ಯಾರೋ ಲಸಿಕೆ ಪಡೆದಿದ್ದಾರೆ ಎಂದು ಆರೋಪಿಸಿರುವ ಅವರು, ತನಿಖೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಬಿಹಾರ: 11 ಸಲ ಕೋವಿಡ್ ಲಸಿಕೆ ಹಾಕಿಸಿ 12ನೇ ಬಾರಿಗೆ ಸಿಕ್ಕಿಬಿದ್ದ ವೃದ್ಧ!

‘ಕೋವಿನ್ ಪೋರ್ಟಲ್’ ಪ್ರಕಾರ ಡಾ. ವಿಭಾ ಕುಮಾರಿ ಸಿಂಗ್ 2021ರ ಜನವರಿ 28ರಂದು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಮಾರ್ಚ್‌ನಲ್ಲಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

ಸರ್ಕಾರಿ ದಾಖಲೆಗಳ ಪ್ರಕಾರ, ಅವರು 2021ರ ಫೆಬ್ರುವರಿ 6ರಂದು ಪ್ಯಾನ್ ಕಾರ್ಡ್ ವಿವರಗಳನ್ನು ನೀಡಿ ಮತ್ತೊಂದು ಡೋಸ್ ಲಸಿಕೆ ಪಡೆದಿದ್ದಾರೆ. ಬಳಿಕ ಜೂನ್‌ನಲ್ಲಿ ಮತ್ತೊಂದು ಡೋಸ್ ಪಡೆದಿದ್ದಾರೆ. 2022ರ ಜನವರಿ 13ರಂದು ಮುನ್ನೆಚ್ಚರಿಕಾ ಡೋಸ್ ಪಡೆದಿದ್ದಾರೆ.

ಈ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಪಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:11 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡ ವೃದ್ಧನ ವಿರುದ್ಧ ಎಫ್ಐಆರ್

84 ವರ್ಷದ ವೃದ್ಧರೊಬ್ಬರು 11 ಬಾರಿ ಕೋವಿಡ್ ಲಸಿಕೆ ಪಡೆದು 12ನೇ ಬಾರಿ ಲಸಿಕೆ ಪಡೆಯಲು ಮುಂದಾಗಿದ್ದಾಗ ಸಿಕ್ಕಿಬಿದ್ದ ವಿದ್ಯಮಾನ ಬಿಹಾರದ ಮಾದೇಪುರ ಜಿಲ್ಲೆಯ ಉರೈ ಗ್ರಾಮದಲ್ಲಿ ಇತ್ತೀಚೆಗೆ ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.