ನವದೆಹಲಿ: 5ಜಿ ನೆಟ್ವರ್ಕ್ 27 ನಗರಗಳಿಗೆ ವಿಸ್ತರಿಸಲಾಗುತ್ತದೆ. ಬುಧವಾರ(ಮಾ.9)ದಿಂದ ಈ ಸೇವೆ ಆರಂಭಗೊಳ್ಳಲಿದೆ ಎಂದು ಟೆಲಿಕಾಂ ಕ್ಷೇತ್ರದ ದಿಗ್ಗಜ ಸಂಸ್ಥೆ ರಿಲಯನ್ಸ್ ತಿಳಿಸಿದೆ.

ಆಂಧ್ರ ಪ್ರದೇಶ, ಛತ್ತಿಸಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳದ 27 ನಗರಗಳಿಗೆ 5ಜಿ ಸೇವೆ ಸಿಗಲಿದೆ. ಈಗಾಗಲೇ ದೇಶದಾದ್ಯಂತ 331 ನಗರಗಳಲ್ಲಿ ಈ ಸೌಲಭ್ಯ ದೊರಕುತ್ತಿದೆ ಎಂದು ರಿಲಯನ್ಸ್ ವಿವರಿಸಿದೆ.

‘ಇಂದಿನಿಂದ ಜಿಯೊದ ಅನ್ಲಿಮಿಟೆಡ್ ಆಫರ್ ಮುಖೇನ ಸೆಕೆಂಡಿಗೆ 1 ಜಿಗಾ ಬೈಟ್ ವೇಗದಲ್ಲಿ ಡೇಟಾ ಬಳಕೆಯನ್ನು ಆನಂದಿಸಬಹುದು. 5ಜಿ ಸೇವೆಯಿಂದಾಗಿ ಅಡೆತಡೆಯಿಲ್ಲದ ವೇಗದ ಇಂಟರ್ನೆಟ್ನ ಸೌಲಭ್ಯ ಅನುಭವಿಸಬಹುದಾಗಿದ್ದು 27 ನಗರಗಳಲ್ಲಿ ಜನಸಾಮಾನ್ಯರಿಗಲ್ಲದೆ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಲಾಭದಾಯಕವಾಗಲಿದೆ‘ ಎಂಬ ಅಭಿಪ್ರಾಯ ತಿಳಿಸಿದೆ.

‘ಇದು ಇಂಟರ್ನೆಟ್ ಸಂಪರ್ಕಿತ ವಿಚಾರ( ಐಒಟಿ), ಆಗ್ಮೆಂಟ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ಹೊಂದಿದೆ. ಆರೋಗ್ಯ, ಶಿಕ್ಷಣ ಹಾಗೂ ಕೃಷಿ ಕ್ಷೇತ್ರಗಳಿಗೆ 5ಜಿ ಬಹಳ ಅನುಕೂಲವಾಗಿದೆ‘ ಎಂಬ ಮಾಹಿತಿಕೊಟ್ಟಿದೆ.

2023ರ ಅಂತ್ಯದ ಹೊತ್ತಿಗೆ ದೇಶದ ಎಲ್ಲಾ ನಗರಗಳಿಗೆ ಜಿಯೊ 5ಜಿ ಸೇವೆ ವಿಸ್ತರಿಸಲಾಗುವುದು ಎಂದು ರಿಲಯನ್ಸ್ ಸಮೂಹದ ಮಾಲಿಕ ಮುಕೇಶ್ ಅಂಬಾನಿ ಈಗಾಗಲೇ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.