ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕಾಶಿ: ಸುರಂಗದಲ್ಲಿ ಅಂತಿಮ ಕಾರ್ಯಾಚರಣೆ– ಕೊನೆಯ ಪೈಪ್ ಒಳಬಿಟ್ಟ ಸಿಬ್ಬಂದಿ

Published 23 ನವೆಂಬರ್ 2023, 3:57 IST
Last Updated 23 ನವೆಂಬರ್ 2023, 3:57 IST
ಅಕ್ಷರ ಗಾತ್ರ

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ಗುರುವಾರ ಮುಂಜಾನೆ ಕಾರ್ಯಾಚರಣೆಯು ಕೊನೆಯ ಹಂತವನ್ನು ಪ್ರವೇಶಿಸಿದ್ದು, ಕಾರ್ಮಿಕರನ್ನು ಹೊರತರುವ ಮಾರ್ಗ ಸಿದ್ಧಪಡಿಸಲು ಕೊನೆಯ ಪೈಪ್ ಅನ್ನು ಒಳಗೆ ಬಿಡಲಾಗಿದೆ.

ಕಾರ್ಮಿಕರನ್ನು ಸ್ಥಳಾಂತರಿಸಿದ ನಂತರ ತಕ್ಷಣವೇ ವೈದ್ಯಕೀಯ ಸೇವೆಯನ್ನು ಒದಗಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊನೆಯ ಪೈಪ್ ಅನ್ನು ಸುರಂಗಕ್ಕೆ ಇಳಿಸಲಾಗುತ್ತಿದೆ ಎಂದು ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಎಲೆಕ್ಟ್ರಿಷಿಯನ್ ಹೇಳಿದರು.

ಬುಧವಾರ ತಡರಾತ್ರಿ ರಂಧ್ರ ಕೊರೆಯುವಾಗ ಕೆಲವು ಕಬ್ಬಿಣದ ರಾಡ್‌ಗಳು ಆಗರ್ ಯಂತ್ರಕ್ಕೆ ಅಡ್ಡಿಪಡಿಸಿದ್ದರಿಂದ ಸಣ್ಣ ಅಡಚಣೆಯಾಗಿದೆ.

ಸಿಲ್ಕ್ಯಾರಾ ಸುರಂಗದಿಂದ ರಕ್ಷಣೆ ಮಾಡಲಾಗುವ ಕಾರ್ಮಿಕರ ಚಿಕಿತ್ಸೆಗಾಗಿ ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಅನ್ನು ಸಿದ್ಧಪಡಿಸಲಾಗಿದೆ. 41ಆ್ಯಂಬುುಲೆನ್ಸ್‌ಗಳನ್ನು ಸುರಂಗದ ಹೊರಗೆ ಸನ್ನದ್ಧಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT