ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ–ಟಿಬೆಟ್‌ ಸಂಘರ್ಷ: ಮಾತುಕತೆಗೆ ಸಿಟಿಎ ಕರೆ

Published 29 ಏಪ್ರಿಲ್ 2024, 16:29 IST
Last Updated 29 ಏಪ್ರಿಲ್ 2024, 16:29 IST
ಅಕ್ಷರ ಗಾತ್ರ

ನವದೆಹಲಿ: ಸುದೀರ್ಘ ಕಾಲದ ಚೀನಾ– ಟಿಬೆಟ್‌ ಸಂಘರ್ಷವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ಟಿಬೆಟ್‌ ಆಡಳಿತ (ಸಿಟಿಎ) ಪುನಃ ಕರೆ ನೀಡಿದೆ.

‘ದಲೈಲಾಮಾ ಅವರ ಪ್ರತಿನಿಧಿಗಳ ಜೊತೆಗೆ ಮಾತ್ರವೇ ಟಿಬೆಟ್‌ ಕುರಿತು ಮಾತುಕತೆ ನಡೆಸಲಾಗುವುದು. ಸಿಟಿಎ ಅಧಿಕಾರಿಗಳ ಜೊತೆ ಮಾತುಕತೆಗೆ ಸಿದ್ಧವಿಲ್ಲ’ ಎಂದು ಚೀನಾ ಹೇಳಿದ ಬೆನ್ನಲ್ಲೇ ಈ ಹೇಳಿಕೆ ನೀಡಿದೆ.

ಸಿಟಿಎ ವಕ್ತಾರ ತೆನ್‌ಜಿನ್‌ ಲೆಕ್‌ಶಾಯ್‌, ‘ಚೀನಾ ಸಂವಿಧಾನದ ಚೌಕಟ್ಟಿನ ಒಳಗೆ ಟಿಬೆಟ್‌ ಜನರಿಗೆ ಸ್ವಾಯತ್ತತೆ ಸಿಗಬೇಕೆಂದು ಬಯಸುತ್ತೇವೆ. ದೀರ್ಘಕಾಲದ ಸಮಸ್ಯೆ ಪರಿಹಾರ ಕಂಡುಕೊಳ್ಳುವುದರಿಂದ ಎರಡೂ ಕಡೆಗೆ ಸಹಾಯವಾಗಲಿದೆ’ ಎಂದು ಹೇಳಿದರು. 

ಕಳೆದ ವಾರ ಸಿಟಿಎ ರಾಜಕೀಯ ಮುಖ್ಯಸ್ಥ ಪೆನ್ಪಾ ಸೆರಿಂಗ್‌ ಅವರು, ‘ಟಿಬೆಟ್‌ ಸಮಸ್ಯೆ ಪರಿಹಾರಕ್ಕೆ ಚೀನಾದೊಂದಿಗೆ ಅನೌಪಚಾರಿಕ ಮಾತುಕತೆಯಲ್ಲಿ ನಿರತವಾಗಿದ್ದೇವೆ. ಆದರೆ, ಇದರ ಮೇಲೆ ನಮಗೆ ಯಾವುದೇ ತಕ್ಷಣದ ನಿರೀಕ್ಷೆಗಳಿಲ್ಲ. ಈ ಪ್ರಯತ್ನ ದೀರ್ಘಾವಧಿಯಲ್ಲಿ ಫಲಿಸಬಹುದು’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT