ನವದೆಹಲಿ: ಅಂತರರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್ನ ‘ಎಕ್ಸ್’ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ.

‘ಮೇ ತಿಂಗಳಿನಲ್ಲಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿನ ಹಲವಾರು ಖಾತೆಗಳ ಜೊತೆಗೆ ರಾಯಿಟರ್ಸ್ನ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರವು ಬೇಡಿಕೆ ಸಲ್ಲಿಸಿತ್ತು’ ಎಂದು ಮೂಲಗಳು ತಿಳಿಸಿವೆ.

ಈ ಬೇಡಿಕೆಯನ್ನು ಪುರಸ್ಕರಿಸಿದ್ದ ‘ಎಕ್ಸ್’ನ ಆಡಳಿತ ಮಂಡಳಿ ಹಲವು ಖಾತೆಗಳನ್ನು ನಿರ್ಬಂಧಿಸಿತ್ತು. ಆದರೆ ರಾಯಿಟರ್ಸ್ನ ಖಾತೆಯನ್ನು ಆಗ ತಡೆಹಿಡಿದಿರಲಿಲ್ಲ.

ಇಲಾನ್ ಮಸ್ಕ್ ಒಡೆತನದ ‘ಎಕ್ಸ್’ ಇದೀಗ ಭಾರತದಲ್ಲಿ ರಾಯಿಟರ್ಸ್ನ ಸಾಮಾಜಿಕ ಜಾಲತಾಣದ ಖಾತೆಯನ್ನು ತಡೆಹಿಡಿದಿದೆ ಎನ್ನಲಾಗಿದೆ.

‘ಈ ಸಮಸ್ಯೆಯು ಇದೀಗ ಪ್ರಸ್ತುತವಾಗಿಲ್ಲದಿರುವುದರಿಂದ ನಿರ್ಬಂಧವನ್ನು ತೆಗೆದುಹಾಕುವಂತೆ ‘ಎಕ್ಸ್’ ಅನ್ನು ಕೇಳಿಕೊಳ್ಳಲಾಗಿದೆ’ ಎಂದು ಕೇಂದ್ರ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

‘ಚೀನಾದ ಗ್ಲೋಬಲ್ ಟೈಮ್ಸ್ ಮತ್ತು ಟರ್ಕಿಯ ಟಿಆರ್ಟಿ ವರ್ಲ್ಡ್ ಮಾಧ್ಯಮ ಸಂಸ್ಥೆಯ ಅಧಿಕೃತ ಖಾತೆಗಳನ್ನು ಸಹ ಇದೀಗ ನಿರ್ಬಂಧಿಸಲಾಗಿದೆ. ಈ ಕ್ರಮ ಅಗತ್ಯವಿಲ್ಲ. ಸಮಸ್ಯೆ ಪರಿಹಾರಕ್ಕಾಗಿ ಎಕ್ಸ್ನೊಂದಿಗೆ ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ’ ಎಂದು ಸರ್ಕಾರ ಹೇಳಿದೆ.

ರಾಯಿಟರ್ಸ್ನ ‘ಎಕ್ಸ್’ ಖಾತೆ ಶೀಘ್ರದಲ್ಲೇ ಮರುಸ್ಥಾಪನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.